ಕರ್ನಾಟಕದ ಇತಿಹಾಸದಲ್ಲಿ ತನ್ನದೇ ಆದ ಸುವರ್ಣ ಇತಿಹಾಸವನ್ನು ಹೊಂದಿರುವಂತ ಪಾವಗಡ ಕೋಟೆಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಇದೆ. ಈ ಕೋಟೆಯಲ್ಲಿ ಜೋಡಿ ಕೋಟೆ, ಮದ್ದಿನ ಮನೆ, ಗರಡಿಮನೆ, ತುಪ್ಪದ ಕಣಜದ ಮನೆ, ಹಾಗೂ ಹೈದರ್ ಅಲಿಯು ವೇಣುಗೋಪಾಲಸ್ವಾಮಿ ದೇವಾಲಯವನ್ನು ತೆಗೆದು ಮಸೀದಿ ಮಾಡಿರುವಂತ ಸ್ಥಳ ಹೀಗೆ ಹಲವಾರು ಸ್ಥಳಗಳು ಕಂಡುಬರುತ್ತವೆ.
ಈ ಕೋಟೆಯು ಬೆಂಗಳೂರಿಂದ ಸುಮಾರು 180 ಕಿ.ಮೀ ದೂರದಲ್ಲಿದೆ ಮತ್ತು ಪಾವಗಡದಿಂದ ಕೇವಲ 01 ಕಿ.ಮೀ ದೂರದಲ್ಲಿದೆ.
ಈ ಕೋಟೆಯನ್ನು ಕಟ್ಟಲು ವಿಜಯನಗರ ಸಾಮ್ರಾಜ್ಯದ ೧ನೇ ಚಿಕ್ಕದೇವರಾಯರು ಸಾಮಂತರಗಿದಂತಾ ಗೋಪಣ್ಣ 1405 ರಲ್ಲಿ ಅಡಿಪಾಯ ಹಾಕಿದರು.
ಈ ಕೋಟೆಯು 07 ದ್ವಾರಗಳನ್ನು ಹೊಂದಿದೆ. ಕೋಟೆಗೆ ಪ್ರವೇಶಿಸಲು ಮೊದಲು ಸಿಗುವುದು ಪತ್ತೆ ಬಾಗಿಲು (ಮೊದಲನೇ ದ್ವಾರ), ಪ್ರವೇಶಿಸಿದ ನಂತರ ಸಿಗುವುದು ಮದ್ದಿನ ಮನೆ. ವಿವಿಧ ಶಾಸನದಲ್ಲಿ ಈ ಸ್ಥಳವನ್ನು ಪಗೊಂಡೆ, ಪಾವಗೊಂಡ, ಪಾಮಗೊಂಡೇ ಎಂದು ಗುರುತಿಸಲಾಗಿದೆ. 1767 ರಲ್ಲಿ ಮರಾಠರು ಮಧುಗಿರಿಯನ್ನು ವಶಪಡಿಸಿಕೊಂಡರು, ನಂತರ ಮರಾಠರು ಈ ಸ್ಥಳವನ್ನು ಪಾವಗಡ ಎಂದು ಅಧಿಕೃತವಾಗಿ ಹೆಸರನ್ನು ಬದಲಿ ಮಾಡುತ್ತಾರೆ.
ಈ ಕೋಟೆಯ 3ನೇ ಬಾಗಿಲನ್ನು ಆಂಜನೇಯ ಬಾಗಿಲು ಎಂದು ಕರೆಯುತ್ತಾರೆ. ಕಾರಣ ಬಾಗಿಲನ್ನು ಪ್ರವೇಶಿಸಿದ ನಂತರ ಸಿಗುವುದು ಆಂಜನೇಯ ಮೂರ್ತಿ. ಇದರ ಒಟ್ಟು ಎತ್ತರ 08 ಅಡಿ. ಮಧುಗಿರಿ ಬಾಗಿಲು, ಪೆನುಗೊಂಡೆ ಬಾಗಿಲು, ನಿಡುಗಲ್ಲು ಹೆಸರಿನ ಬಾಗಿಲುಗಳಿವೆ.
ವಿಜಯನಗರ ಅರಸರಲ್ಲಿ ಭಂಡಾರ ರಕ್ಷಣೆ ಮಾಡುತ್ತಿದ್ದ ಗೊಲ್ಲ ಜನಾಂಗದ ಬಲ್ಲಪ್ಪನಾಯಕ 1585ರಲ್ಲಿ ಪಾವಗಡ ಸ್ಥಾಪಿಸಿದ ಎಂಬ ಉಲ್ಲೇಖವಿದೆ. 1799ರಲ್ಲಿ ಬ್ರಿಟಿಷರ ವಶವಾಯಿತು. ಈ ಕೋಟೆಯ ಬೆಟ್ಟದ ಮೇಲೆ ಅಕ್ಕಮ್ಮ, ಭೀಮನ ಹೆಸರಿನ ದೊಣೆಗಳಿವೆ. ತುಪ್ಪದ ಕಣಜವಿದೆ. ತುದಿಯಲ್ಲಿ ಸುಲ್ತಾನ ಬತ್ತೇರಿ ಇದೆ. ಪಾವಗಡ ಕೋಟೆಯಲ್ಲಿ ಅರಮನೆ, ನೆಲಮಾಳಿಗೆ, ಬತ್ತೇರಿ, ಕಂದಕಗಳು, ಮದ್ದುಗುಂಡು ತಯಾರಿಕೆ ಸ್ಥಳ, ಕಬ್ಬಿಣದಿಂದ ಆಯುಧ ತಯಾರಿಸುವ ಕೇಂದ್ರವೂ ಇತ್ತೆಂದು ಹೇಳಲಾಗುತ್ತದೆ.
ಭೇಟಿ ನೀಡಿ