ಮೂಲೆ ಶಂಕರೇಶ್ವರ ದೇವಸ್ಥಾನ

ಮೂಲೆ ಶಂಕರ ದೇವಾಲಯವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಇರುವ ಅದ್ಭುತ ಈಶ್ವರ ದೇವಾಲಯವಾಗಿದೆ. ಈ ದೇವಾಲಯವು ಭೂಮಿಜ ಶೈಲಿಯಲ್ಲಿ ನಿರ್ಮಾಣವಾಗಿದ್ದು, ಹೊಯ್ಸಳರ ಮೂರನೇ ನರಸಿಂಹ ರಾಜನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಕರ್ನಾಟಕದಲ್ಲಿ ಭೂಮಿಜ ಶೈಲಿಯಲ್ಲಿರುವ ದೇವಾಲಯಗಳಲ್ಲಿ ಇದು ಅತ್ಯಂತ ವಿಶಿಷ್ಟವಾದುದಾಗಿದೆ.

ಕರ್ನಾಟಕದಲ್ಲಿ ಭೂಮಿಜ ಮಾದರಿಯಲ್ಲಿರುವ ದೇವಾಲಯಗಳು ಅತಿ ಕಡಿಮೆ ಇದ್ದು, ಅವುಗಳಲ್ಲಿ ಒಂದೇ ಈ ಮೂಲೆ ಶಂಕರ ದೇವಾಲಯವಾಗಿದೆ. ಮತ್ತೊಂದು ಉದಾಹರಣೆ ಎಂದರೆ ಸದಾಶಿವ ದೇವಾಲಯ.

ತುರುವೇಕೆರೆ ಮೂಲೆ ಶಂಕರೇಶ್ವರ ದೇವಸ್ಥಾನದ ದೂರಗಳು

  • ಬೆಂಗಳೂರು – 123 ಕಿ.ಮೀ
  • ತುಮಕೂರು – 63 ಕಿ.ಮೀ
  • ತುರುವೇಕೆರೆ – 1 ಕಿ.ಮೀ
  • ಕೆಬಿ ಕ್ರಾಸ್ – 17 ಕಿ.ಮೀ
  • ಬಾಣಸಂದ್ರ ರೈಲ್ವೆ ನಿಲ್ದಾಣ – 12 ಕಿ.ಮೀ

ಮೂಲೆ ಶಂಕರ ದೇವಾಲಯವು ಒಟ್ಟು 64 ಮೂಲೆಗಳನ್ನು ಹೊಂದಿರುವ ವಿಶಿಷ್ಟ ವಿನ್ಯಾಸದ ದೇವಾಲಯವಾಗಿದೆ. ಈ ದೇವಾಲಯವನ್ನು ಹೊಯ್ಸಳ ಕಾಲದ ಪ್ರಸಿದ್ಧ ಶಿಲ್ಪಿ ಮಲ್ಲಿತಂಮ ನಿರ್ಮಿಸಿದನು.

ದೇವಾಲಯವು ಪೂರ್ವಾಭಿಮುಖವಾಗಿದ್ದು, ಪ್ರವೇಶ ದ್ವಾರವು ದಕ್ಷಿಣಾಭಿಮುಖವಾಗಿದೆ. ದೇವಾಲಯದ ನಿರ್ಮಾಣದ ಕುರಿತು ಐತಿಹಾಸಿಕ ಮಾಹಿತಿಯ ಪ್ರಕಾರ, ಇದೇ ಊರಿನಲ್ಲಿ ಇರುವ ಚೆನ್ನಕೇಶವ ದೇವಾಲಯದ ಒಂದು ಶಾಸನದಲ್ಲಿ ಕ್ರಿ.ಶ. 1258ರ ಸುಮಾರಿಗೆ ಈ ದೇವಾಲಯ ನಿರ್ಮಾಣಗೊಂಡಿದೆ ಎಂದು ಉಲ್ಲೇಖಿಸಲಾಗಿದೆ.

ಭೇಟಿ ನೀಡಿ
ತುರುವೇಕೆರೆ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section