ಚೆನ್ನಕೇಶವ ದೇವಾಲಯ ನಾಗಲಾಪುರವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಇರುವ ಒಂದು ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ದೇವಾಲಯವಾಗಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಿತಗೊಂಡ ಎರಡು ದೇವಾಲಯಗಳು ಈ ನಾಗಲಾಪುರ ಗ್ರಾಮದಲ್ಲಿದೆ. ಇನ್ನೊಂದು ದೇವಾಲಯವೆಂದರೆ ಪ್ರಾಚೀನ ಹೊಯ್ಸಳ ಶ್ರೀ ಕೇದಾರೇಶ್ವರ ಸ್ವಾಮಿ ದೇವಾಲಯ.
ಈ ದೇವಾಲಯ ಬೆಂಗಳೂರಿನಿಂದ 127 ಕಿ.ಮೀ ಮತ್ತು ತುಮಕೂರು ನಗರದಿಂದ 68 ಕಿ.ಮೀ ದೂರದಲ್ಲಿದೆ. ಹಾಗೂ ತುರುವೇಕೆರೆ ನಗರದಿಂದ 10 ಕಿ.ಮೀ ದೂರದಲ್ಲಿದೆ.
ಚನ್ನಕೇಶವ ದೇವಾಲಯವು ಏಕಕೂಟ ದೇವಾಲಯವಾಗಿದ್ದು, ಕಾಲದ ಹೊಡೆತಕ್ಕೆ ಸಿಕ್ಕಿ ಹಾಳಾಗಿದೆ. ಆದರೆ ಭಾರತೀಯ ಪುರಾತತ್ವ ಇಲಾಖೆಯು ಈ ದೇವಾಲಯವನ್ನು ಸಂರಕ್ಷಿಸುವಲ್ಲಿ ಹರಸಾಹಸ ಪಟ್ಟಿದೆ.
ಈ ಗುಡಿ ಇನ್ನಿತರ ಹೊಯ್ಸಳರ ಕಾಲದ ದೇವಾಲಯದ ರೀತಿಯಲ್ಲಿ ಒಂದು ವೇದಿಕೆಯ ಮೇಲೆ ನಕ್ಷತ್ರಾಕಾರದಲ್ಲಿ ನಿರ್ಮಾಣಗೊಂಡಿದೆ. ಗುಡಿಯ ಒಳ ಮತ್ತು ಹೊರ ಭಾಗ ಸಮಾನವಾಗಿ ಅಲಂಕಾರಿಕವಾಗಿದ್ದು ಅತ್ಯಂತ ಕ್ಲಿಷ್ಟವಾದ ಕೆತ್ತನೆಗಳನ್ನು ಹೊಂದಿದೆ. ಭವ್ಯವಾದ ಮತ್ತು ವಿಶಿಷ್ಟವಾದ ಚಾವಣಿ ಇದ್ದು ಲೇಥ್ ಮಾದರಿಯ ನುಣುಪಾದ ಕಂಬಗಳು ನೋಡುಗರ ಮನಸು ಸೋರೆ ಗೊಂಡಿದೆ.
ಭೇಟಿ ನೀಡಿ