ಗಂಗಾದರೇಶ್ವರ ದೇವಸ್ಥಾನ ತುರುವೇಕೆರೆಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಇರುವ ಹೊಯ್ಸಳರು ಕಾಲದ ದೇವಾಲಯವಾಗಿದೆ. ಅದರಲ್ಲಿ ಶಿವಲಿಂಗವು ಪ್ರಪಂಚದ ಅನೇಕ ಲಿಂಗಗಳಲ್ಲಿ ವಿಶಿಷ್ಟವಾಗಿದೆ. ಇಲ್ಲಿನ ವಿಶಿಷ್ಟ ವ್ಯತ್ಯಾಸವೆಂದರೆ, ಶಿವನ ವಿಗ್ರಹವು ಗಂಗೆಯನ್ನು ತನ್ನ ತಲೆಯ ಮೇಲೆ ಕುಳಿತಿರುವಂತೆ ಕೆತ್ತಲಾಗಿದೆ ಮತ್ತು ಪ್ರಭಾವಲಿ ರೂಪದಲ್ಲಿ ಹರಿಯುವ ನೀರಿನ ಕಾರಂಜಿಗಳನ್ನು ನೋಡಬಹುದು.
ಈ ದೇವಾಲಯ ಬೆಂಗಳೂರಿನಿಂದ 124 ಕಿ.ಮೀ ಮತ್ತು ತುಮಕೂರು ನಗರದಿಂದ 61 ಕಿ.ಮೀ ದೂರದಲ್ಲಿದೆ. ಹಾಗೂ ತುರುವೇಕೆರೆ ನಗರದಿಂದ ಕೇವಲ 1.2 ಕಿ.ಮೀ ದೂರದಲ್ಲಿದೆ.
ಈ ದೇವಾಲಯದ ಮುಖಮಂಟಪದಲ್ಲಿರುವ ನಂದಿಯು ಬಹಳ ಅದ್ಭುತವಾಗಿದೆ. ಬಳಪದ ಕಲ್ಲಿನಲ್ಲಿ ತಯಾರಿಸಿರುವ ಸುಮಾರು ಏಳು ಅಡಿ ಎತ್ತರದ ನಂದಿಯು ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಮೊಣಕಾಲು ಮಡಿಸಿಕೊಂಡು ಕುಳಿತು ನೋಡುತ್ತಿರುವಂತೆ ಚಿತ್ರಿಸಲಾಗಿದೆ ನಂದಿಯು ಹೊಳೆಯುತ್ತಿದ್ದು ಕನ್ನಡಿಯಂತೆ ಕಾಣುತ್ತದೆ. ನಂದಿಯು ಶಿರಕ್ಕೆ ಧರಿಸಿರುವ ಗೆಜ್ಜೆಸರ, ಅಭರಣಗಳು, ಘಂಟಾನರ, ಬೆನ್ನಿನ ಭಾಗ ನುಣ್ಣಗೆ ಸರಪಳಿ ಮು೦ತಾದ ಅಲಂಕಾರಗಳು ನೋಡುಗರನ್ನು ಚಕಿತಗೊಳಿಸುತ್ತವೆ. ನಂದಿಯ ಕೊರಳಲ್ಲಿ ಇಷ್ಟಲಿಂಗವಿದೆ.
ಗಂಗಾಧರೇಶ್ವರ ದೇವಾಲಯದಲ್ಲಿರುವ ಅಮ್ಮನವರ ದೇವಾಲಯದಲ್ಲಿ ಪಾರ್ವತಿಯ ಮೂರ್ತಿಯಿದೆ. ಈ ದೇವಿಯನ್ನು ಆಧಾರ ಶಕ್ತಿ’ ಎಂದು ಕರೆಯುವರು. ಆಧಾರಶಕ್ತಿಯು ದೇವಿಯು ತಪೋಭಂಗಿಯಲ್ಲಿರುವ ಒಂದು ಮೂರ್ತಿಯಾಗಿರುತ್ತದೆ. ದೇವಿಯ ಹಣೆಯಲ್ಲಿ ಮೂರನೆಯ ಕಣ್ಣು ಸಹ ಇದೆ, ಅಭಯ, ವರದ ಪಾಶ, ಅಂಕುಶಗಳನ್ನು ಧರಿಸಿರುವ ದೇವಿಯು ತಪಸ್ಸನ್ನು ಆಚರಿಸುವ ಭಂಗಿಯಲ್ಲಿದ್ದು ಇದೂ ಸಹಾ ಒಂದು ಅಪರೂಪದ ಮೂರ್ತಿಯಾಗಿರುವುದು.
ಭೇಟಿ ನೀಡಿ




