ಮುನಿನಗರ ಆಣೆಕಟ್ಟು ಮತ್ತು ಜಲಾಶಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮುನಿನಗರ ಗ್ರಾಮದಲ್ಲಿದೆ. ಇದು ಒಂದು ಚೆಕ್‌ಡ್ಯಾಮ್ ಡ್ಯಾಮ್ ಆಗಿದ್ದು, ಈ ಜಲಾಶಯವು ಸುಮಾರು 30–40 ಎಕರೆ ವಿಸ್ತೀರ್ಣವನ್ನು ಹೊಂದಿದೆ ಮತ್ತು ಹತ್ತಿರದ ಗ್ರಾಮಗಳಿಗೆ ನೀರಿನ ಮೂಲವಾಗಿದೆ. ಜೊತೆಗೆ ಜಲಾಶಯದ ಪಕ್ಕದಲ್ಲಿ ಮಹದೇಶ್ವರ ದೇವಾಲಯವಿದೆ.
ಮುನಿನಗರ ಅಣೆಕಟ್ಟು ನ ದೂರಗಳು
- ಬೆಂಗಳೂರು – 38 ಕಿ.ಮೀ
- ರಾಮನಗರ – 41 ಕಿ.ಮೀ
- ಕನಕಪುರ – 35 ಕಿ.ಮೀ
- ಹಾರೋಹಳ್ಳಿ – 16 ಕಿ.ಮೀ
- ಕಗ್ಗಲೀಪುರ – 10 ಕಿ.ಮೀ
ಈ ಜಲಾಶಯವು ಒಂದು ಆಕರ್ಷಕ ಪ್ರವಾಸಿ ತಾಣವಾಗಿದೆ. ಸುತ್ತಮುತ್ತಲಿನ ಹಚ್ಚ ಹಸಿರು ಬೆಟ್ಟಗಳು ಮತ್ತು ನೈಸರ್ಗಿಕ ಸೌಂದರ್ಯ ಪ್ರವಾಸಿಗರನ್ನು ಸೆಳೆಯುತ್ತವೆ. ಇಲ್ಲಿಗೆ ಬರುವವರು ಸುಂದರ ದೃಶ್ಯಾವಳಿಗಳನ್ನು ಆನಂದಿಸಿ, ಪ್ರಕೃತಿಯ ಸೌಂದರ್ಯವನ್ನು ಸಂಪೂರ್ಣವಾಗಿ ಸವಿಯಬಹುದು.
ಭೇಟಿ ನೀಡಿ







