ಬೂದಿಕೋಟೆ ಕೋಟೆ ಮತ್ತು ಹೈದರಾಲಿಯ ಜನ್ಮಸ್ಥಳ

ಬೂದಿಕೋಟೆ ಕೋಟೆ ಹಾಗೂ ಹೈದರಾಲಿಯ ಜನ್ಮಸ್ಥಳವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆಯಲ್ಲಿ ಇದೆ. ಈ ಸ್ಥಳವು ಟಿಪ್ಪು ಸುಲ್ತಾನನ ತಂದೆ ಹೈದರಾಲಿಯ ಜನ್ಮಸ್ಥಳವಾಗಿ ಪ್ರಸಿದ್ಧವಾಗಿದೆ. ಹಿಂದೆ ಈ ಸ್ಥಳವನ್ನು “ವಿಭೂತಿಪುರ” ಎಂದು ಕರೆಯಲಾಗುತ್ತಿತ್ತು.

ಬೂದಿಕೋಟೆ ಅಣೆಕಟ್ಟಿನ ದೂರಗಳು

  • ಬೆಂಗಳೂರು – 82 ಕಿ.ಮೀ
  • ಕೋಲಾರ – 31 ಕಿ.ಮೀ
  • ಬಂಗಾರಪೇಟೆ – 13 ಕಿ.ಮೀ
  • ಬಂಗಾರಪೇಟೆ ರೈಲ್ವೆ ನಿಲ್ದಾಣ – 30 ಕಿ.ಮೀ
  • ಕೋಲಾರ ರೈಲ್ವೆ ನಿಲ್ದಾಣ – 30 ಕಿ.ಮೀ
  • ಬೆಂಗಳೂರು ವಿಮಾನ ನಿಲ್ದಾಣ – 112 ಕಿ.ಮೀ

ಬೂದಿಕೋಟೆಯು 17ನೇ ಶತಮಾನದಲ್ಲಿ ಶಿರಾ ಸುಭೇದಾರನ ಅಧೀನದಲ್ಲಿ ಪೌಜುದಾರನಾಗಿದ್ದ ಫತೇಹ್ ಮಹಮ್ಮದ್ ಅವರ ಜಹಗೀರು ಆಗಿತ್ತು. ಇವರ ಮಗನೇ ಹೈದರಾಲಿ. ಮೈಸೂರು ಚರಿತ್ರೆಯಲ್ಲಿ ಪ್ರಮುಖ ಸ್ಥಾನ ಪಡೆದ ಹೈದರಾಲಿಯ ಜನ್ಮಸ್ಥಳವೂ ಇದೇ ಆಗಿದ್ದು, ಅವರು 1720ರಲ್ಲಿ ಇಲ್ಲಿ ಜನಿಸಿದರು.

ಬೂದಿಕೋಟೆಯಲ್ಲಿ ಶಿಥಿಲಗೊಂಡ ಕೋಟೆಯ ಅವಶೇಷಗಳು ಕಾಣಿಸುತ್ತವೆ. ಈ ಕೋಟೆಯೊಳಗೆ ಅನೇಕ ದೇವಾಲಯಗಳೂ ಇವೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಉಸ್ತುವಾರಿಯಲ್ಲಿರುವ ಈ ಕೋಟೆಯೊಳಗೆ ಕಲ್ಲಿನಲ್ಲಿ ಕೆತ್ತಿದ ಆಂಜನೇಯಸ್ವಾಮಿ ದೇವಾಲಯ ಹಾಗೂ ಕೋಟೆ ವೇಣುಗೋಪಾಲಸ್ವಾಮಿ ದೇವಾಲಯವಿದೆ. ಈ ದೇವಾಲಯಗಳು ಶಿಥಿಲಗೊಂಡಿದ್ದರೂ, ಇತ್ತೀಚೆಗೆ ಗ್ರಾಮಸ್ಥರು ಅವನ್ನು ಸುಂದರಗೊಳಿಸಿದ್ದಾರೆ. ಹೈದರಾಲಿಯ ಜನ್ಮಸ್ಥಳದಲ್ಲಿ ಸ್ಮಾರಕವೊಂದೂ ನಿರ್ಮಿಸಲಾಗಿದೆ.

ಬೂದಿಕೋಟೆಯನ್ನು ಹಿಂದಿನ ಕಾಲದಲ್ಲಿ “ವಿಭೂತಿಪುರ” ಎಂದು ಕರೆಯಲಾಗುತ್ತಿತ್ತು. ಇದರ ಹಿಂದೆ ವಿಶೇಷವಾದ ಐತಿಹಾಸಿಕ ಹಿನ್ನೆಲೆ ಇದೆ. ಆ ಕಾಲದಲ್ಲಿ ಈ ಪ್ರದೇಶದಲ್ಲಿ ಋಷಿಮುನಿಗಳು ನಿರಂತರವಾಗಿ ಯಾಗ–ಯಜ್ಞಗಳನ್ನು ನಡೆಸುತ್ತಿದ್ದರು. ಈ ಧಾರ್ಮಿಕ ಕ್ರಿಯೆಗಳ ಪರಿಣಾಮವಾಗಿ ಎಲ್ಲೆಡೆ ಬೂದಿ ಹರಡಿಕೊಂಡಿರುತ್ತಿತ್ತು. ಇದರಿಂದಲೇ ಈ ಪ್ರದೇಶಕ್ಕೆ “ವಿಭೂತಿಪುರ” ಎಂಬ ಹೆಸರು ಬಂದಿತು (“ವಿಭೂತಿ” ಎಂದರೆ ಬೂದಿ).

ನಂತರದ ದಿನಗಳಲ್ಲಿ ಹೈದರಾಲಿಯ ಆಳ್ವಿಕೆಯಲ್ಲಿ ಇಲ್ಲಿ ಕೋಟೆ ನಿರ್ಮಿಸಲಾಯಿತು. ಈ ಕಾರಣದಿಂದ “ವಿಭೂತಿ” (ಬೂದಿ) ಮತ್ತು “ಕೋಟೆ” ಎಂಬ ಪದಗಳನ್ನು ಸೇರಿಸಿ ಈ ಸ್ಥಳಕ್ಕೆ “ಬೂದಿಕೋಟೆ” ಎಂಬ ಹೆಸರು ಬಂದಿತು. ಅಂದಿನಿಂದ ಇದು ಬೂದಿಕೋಟೆಯೆಂದು ಪ್ರಸಿದ್ಧವಾಗಿದೆ.

ಭೇಟಿ ನೀಡಿ
ಬಂಗಾರಪೇಟೆ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಕೋಲಾರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section