ಯರಗೋಳ ಅಣೆಕಟ್ಟು

ಯರಗೋಳ ಅಣೆಕಟ್ಟು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬಲಮಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಅಣೆಕಟ್ಟಾಗಿದೆ. ಈ ಅಣೆಕಟ್ಟು ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಸುತ್ತಮುತ್ತಲಿನ ಸುಮಾರು 45 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ.

ಯರಗೋಳ ಅಣೆಕಟ್ಟಿನ ದೂರಗಳು

  • ಬೆಂಗಳೂರು – 88 ಕಿ.ಮೀ
  • ಕೋಲಾರ – 45 ಕಿ.ಮೀ
  • ಬಂಗಾರಪೇಟೆ – 28 ಕಿ.ಮೀ
  • ಬಂಗಾರಪೇಟೆ ರೈಲ್ವೆ ನಿಲ್ದಾಣ – 28 ಕಿ.ಮೀ
  • ಕೋಲಾರ ರೈಲ್ವೆ ನಿಲ್ದಾಣ – 44 ಕಿ.ಮೀ
  • ಬೆಂಗಳೂರು ವಿಮಾನ ನಿಲ್ದಾಣ – 125 ಕಿ.ಮೀ

ಈ ಅಣೆಕಟ್ಟಿನ ಆಯಾಮಗಳು: ಎತ್ತರ 40 ಮೀಟರ್ (132 ಅಡಿ) ಮತ್ತು ಉದ್ದ 414 ಮೀಟರ್ (1366 ಅಡಿ) ಆಗಿವೆ.

ಸುಮಾರು 308.46 ಕೋಟಿ ರೂ.ಗಳ ಯೋಜನೆಯ ಭಾಗವಾಗಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಮಾರ್ಕಂಡೇಯ ಜಲಾಶಯದಿಂದ ತಮಿಳುನಾಡಿಗೆ ಹರಿಯುವ ನೀರನ್ನು ನಿಯಂತ್ರಿಸಲು ಹಾಗೂ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳು ಸೇರಿದಂತೆ ಮೂರು ತಾಲ್ಲೂಕುಗಳ ಸುಮಾರು 45 ಹಳ್ಳಿಗಳಿಗೆ ನೀರು ಒದಗಿಸುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ.

ಜಿಲ್ಲೆಯ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಿಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ನಿರ್ಮಿಸಲಾದ ಯರಗೋಳ ಅಣೆಕಟ್ಟನ್ನು 2023ರ ನವೆಂಬರ್ 11ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ಭೇಟಿ ನೀಡಿ
ಬಂಗಾರಪೇಟೆ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಕೋಲಾರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section