ಸಾದಹಳ್ಳಿ ಕ್ವಾರಿ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗ್ರಾಮದಲ್ಲಿ ಇರುವ ದೇವಾಲಯವಾಗಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಈ ಪ್ರದೇಶವು ಕ್ವಾರಿ ಚಟುವಟಿಕೆಗಳಿಂದ ಸ್ವಲ್ಪ ಜನಪ್ರಿಯತೆಯನ್ನು ಗಳಿಸಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಸಾದಹಳ್ಳಿಯಲ್ಲಿ, ವಿಶಾಲವಾದ ಕ್ವಾರಿಯ ಮಧ್ಯದಲ್ಲಿ ಈ ದೇವಾಲಯ ನಿರ್ಮಿತವಾಗಿದೆ.
ಈ ಸ್ಥಳವು ಬೆಂಗಳೂರು ನಗರದಿಂದ 29 ಕಿ.ಮೀ ಮತ್ತು ದೇವನಹಳ್ಳಿ ನಗರದಿಂದ 12 ಕಿ.ಮೀ ದೂರದಲ್ಲಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಹಾಗೆಯೇ ವಿಮಾನ ನಿಲ್ದಾಣದ ಟೋಲ್‌ಗೇಟ್‌ನಿಂದ ಕೇವಲ 5 ಕಿ.ಮೀ ದೂರದಲ್ಲಿದೆ.
ಈ ಕ್ವಾರಿ ಪ್ರದೇಶದಲ್ಲಿ ಅಪಾರ ಪ್ರಮಾಣದ ಭೂಮಿಯನ್ನು ಸುಮಾರು 200 ಮೀಟರ್ ಆಳದವರೆಗೆ ಅಗೆಯಲಾಗಿದೆ. ಈ ದೇವಾಲಯವು ಸಾಮಾನ್ಯ ದೇವಾಲಯಕ್ಕಿಂತ ಭಿನ್ನವಾಗಿದೆ. ಇದು ಈಗ ಗ್ರಾನೈಟ್ ಗೋಪುರದಂತೆ ಕಾಣುತ್ತದೆ. ಕ್ವಾರಿಯ ಮಧ್ಯಭಾಗದಲ್ಲಿದ್ದ ದೇವಸ್ಥಾನವನ್ನು ಯಥಾಸ್ಥಿತಿಯಲ್ಲೇ ಉಳಿಸಲಾಗಿದೆ ಎಂಬುದು ತಿಳಿದಾಗ ಇನ್ನಷ್ಟು ಆಶ್ಚರ್ಯವಾಗುತ್ತದೆ. ಶಿವನ ಅಭಿವ್ಯಕ್ತಿಯಾದ ಮುನೇಶ್ವರ ದೇವರಿಗೆ ಸಮರ್ಪಿತ ಈ ಕ್ವಾರಿ ಗುಡಿ, ನೀಲಿ ಬಣ್ಣದ ದೇವಾಲಯವಾಗಿದ್ದು ಮೂಲ ಬೆಟ್ಟದ ಮೇಲೆಯೇ ನಿಂತಿದೆ. ಕ್ವಾರಿಯ ಮಧ್ಯಭಾಗದಲ್ಲಿರುವ ಈ ದೇವಾಲಯಕ್ಕೆ ಕಲ್ಲುಗಣಿ ಪ್ರದೇಶದ ಅಂಚಿನಿಂದ ಸಂಪರ್ಕಿಸುವ ದಾರಿಯಿದೆ.
ಸಾದಹಳ್ಳಿಯಲ್ಲಿ ವಿಶಾಲವಾದ ಕ್ವಾರಿಯ ಮಧ್ಯೆ ಕಲ್ಲುಗಣಿ ದೇವಾಲಯವಿದೆ. ಸಾದಹಳ್ಳಿಯು ಗ್ರಾನೈಟ್ ಕ್ವಾರಿಗೆ ಹೆಸರುವಾಸಿಯಾಗಿದೆ. ಅದು ಈಗ ಗ್ರಾನೈಟ್ ಗೋಪುರದಂತೆ ಕಾಣುತ್ತದೆ. ಇದು ಖಾಸಗಿ ಆಸ್ತಿಯಾಗಿದೆ, ಆದರೆ ದೇವಾಲಯವಿರುವುದರಿಂದ ನೀವು ಇನ್ನೂ ಈ ಸ್ಥಳಕ್ಕೆ ಪ್ರವೇಶ ಪಡೆಯಬಹುದು.
ದೇವಸ್ಥಾನಕ್ಕೆ ಹೋಗಲು ಮೂರು ಅಡಿ ಅಗಲದ ಸೇತುವೆಯಂತೆ ಕಾಣುವ ಗ್ರಾನೈಟ್ ಗೋಡೆ ಇದೆ. ಸೇತುವೆಯ ಮೇಲಿನ ನಡಿಗೆ ಸ್ವಲ್ಪ ಭಯಾನಕವಾಗಿದ್ದು, ದೇವಾಲಯವನ್ನು ತಲುಪಲು ಒಬ್ಬೊಬ್ಬರಾಗಿ ನಡೆದುಕೊಂಡು ಹೋಗಬಹುದು. ಈ ಸ್ಥಳವು ನಗರದ ಎತ್ತರದ ಭಾಗದಲ್ಲಿರುವುದರಿಂದ, ಗದ್ದಲದಿಂದ ದೂರವಾಗಿ ಇಲ್ಲಿಂದ ನಗರವನ್ನು ವೀಕ್ಷಿಸಲು ಇದು ಉತ್ತಮ ಸ್ಥಳವಾಗಿದೆ. ಈ ಸ್ಥಳವು ನಿಮಗೆ ಶಾಂತಿಯನ್ನು ನೀಡುತ್ತದೆ.
ಕ್ವಾರಿಯಲ್ಲಿ ಮಳೆ ಬಂದಾಗ ಸಂಗ್ರಹವಾದ ನೀರು ಕಲ್ಯಾಣಿಯ ರೂಪದಲ್ಲಿ, ಸಣ್ಣ ಸಣ್ಣ ಕೊಳಗಳಂತೆ ಎರಡೂ ಪಕ್ಕಗಳಲ್ಲಿ ಸೃಷ್ಟಿಯಾಗಿದೆ. ಗ್ರಾನೈಟ್‌ನ ಬಿಳಿ ಬಣ್ಣದಿಂದ ಇಡೀ ಸ್ಥಳವು ತುಂಬಾ ರಮಣೀಯವಾಗಿ ಕಾಣುತ್ತದೆ.
ಭೇಟಿ ನೀಡಿ






