ಮುನಿನಗರ ಆಣೆಕಟ್ಟು ಮತ್ತು ಜಲಾಶಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮುನಿನಗರ ಗ್ರಾಮದಲ್ಲಿದೆ. ಇದು ಒಂದು ಚಿಕ್ಕ ಚೆಕ್ ಡ್ಯಾಮ್ ಆಗಿದ್ದು, ಈ ಜಲಾಶಯವು 30-40 ಎಕರೆ ವಿಸ್ತೀರ್ಣವನ್ನು ಹೊಂದಿದೆ ಮತ್ತು ಹತ್ತಿರದ ಗ್ರಾಮಗಳಿಗೆ ನೀರಿನ ಮೂಲವಾಗಿದೆ. ಹಾಗೂ ಜಲಾಶಯದ ಪಕ್ಕದಲ್ಲಿ ಮಹದೇಶ್ವರ ದೇವಾಲಯವಿದೆ.
ಈ ಜಲಾಶಯವು ಬೆಂಗಳೂರಿಂದ 38 ಕಿ.ಮೀ, ಬೆಂಗಳೂರು ದಕ್ಷಿಣ (ರಾಮನಗರ) ದಿಂದ 41 ಕಿ.ಮೀ ಮತ್ತು ಕನಕಪುರ ದಿಂದ 35 ಕಿ.ಮೀ ದೂರದಲ್ಲಿದೆ. ಹಾಗೂ ಹಾರೋಹಳ್ಳಿಯಿಂದ 16 ಕಿ.ಮೀ ಮತ್ತು ಕಗ್ಗಲೀಪುರದಿಂದ ಕೇವಲ 10 ಕಿ.ಮೀ ದೂರದಲ್ಲಿದೆ.
ಈ ಜಲಾಶಯವು ಒಂದು ಉತ್ತಮ ಪ್ರವಾಸಿ ತಾಣವಾಗಿದೆ. ಸುತ್ತಮುತ್ತಲಿನ ಹಚ್ಚ ಹಸಿರಿನ ಬೆಟ್ಟಗಳು ಮತ್ತು ಪ್ರಕೃತಿಯು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ಸುಂದರವಾದ ದೃಶ್ಯಾವಳಿಗಳನ್ನು ಆನಂದಿಸಬಹುದು ಮತ್ತು ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು.
ಭೇಟಿ ನೀಡಿ







