ಸಂಗಮ

ಸಂಗಮವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಅರ್ಕಾವತಿ ಮತ್ತು ಕಾವೇರಿ ನದಿಗಳು ಸಂಗಮಗೊಳ್ಳುವ ಸ್ಥಳವಾಗಿದೆ. ಇದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಪ್ರತಿದಿನ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಜಲಕ್ರೀಡೆ ಹಾಗೂ ತೆಪ್ಪ ವಿಹಾರದ ಸೌಲಭ್ಯಗಳನ್ನು ಒದಗಿಸಲಾಗಿದೆ.

ಸಂಗಮದ ದೂರಗಳು

  • ಬೆಂಗಳೂರು – 92 ಕಿ.ಮೀ
  • ರಾಮನಗರ – 63 ಕಿ.ಮೀ
  • ಕನಕಪುರ – 33 ಕಿ.ಮೀ

ಅರ್ಕಾವತಿ ನದಿಯು ಕನಕಪುರ ಮಾರ್ಗವಾಗಿ ಸುಮಾರು 32 ಕಿಲೋಮೀಟರ್ ಹರಿದು, ತಾಲ್ಲೂಕಿನ ದಕ್ಷಿಣ ಭಾಗದ ಅರಣ್ಯ ಪ್ರದೇಶವನ್ನು ದಾಟಿ, ಸಂಗಮದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಈ ಎರಡು ನದಿಗಳ ಸಂಗಮದ ನಂತರ, ಕಾವೇರಿ ನದಿಯ ಎಡ ದಂಡೆಯಲ್ಲಿ ಸುಮಾರು 5 ಕಿಲೋಮೀಟರ್ ದೂರದಲ್ಲಿ ಮೇಕೆದಾಟು ಇದೆ.

ಭೇಟಿ ನೀಡಿ
ಕನಕಪುರ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section