ಸುವರ್ಣಮುಖಿ ಜಲಾಶಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ಕಂಚುಗಾರನಹಳ್ಳಿ ಗ್ರಾಮದಲ್ಲಿದೆ. ಇದು ದೊಡ್ಡ ಸರೋವರದಂತಿರುವ ಒಂದು ಸಣ್ಣ ಜಲಾಶಯವಾಗಿದ್ದು, ನಿತ್ಯಹರಿದ್ವರ್ಣವಲ್ಲದ ಸಣ್ಣ ನದಿಗೆ ಅಡ್ಡಲಾಗಿ ತಡೆಗೋಡೆ (ಆಣೆಕಟ್ಟು) ನಿರ್ಮಿಸಲಾಗಿದೆ.
ಈ ಜಲಾಶಯವು ಬೆಂಗಳೂರಿನಿಂದ 47 ಕಿ.ಮೀ, ಬೆಂಗಳೂರು ದಕ್ಷಿಣ (ರಾಮನಗರ)ದಿಂದ 30 ಕಿ.ಮೀ ದೂರದಲ್ಲಿದೆ. ಹಾಗೂ ಕನಕಪುರದಿಂದ 21 ಕಿ.ಮೀ ಮತ್ತು ಹಾರೋಹಳ್ಳಿಯಿಂದ ಕೇವಲ 5 ಕಿ.ಮೀ ದೂರದಲ್ಲಿದೆ.
ಕೆರೆಯ ಎರಡೂ ಬದಿಗಳಲ್ಲಿ ಸೋರಿಕೆ ಮಾರ್ಗದವರೆಗೆ ಬಂಡೆಯ ಮೇಲಿಂದ ನಡೆಯಬಹುದು ಮತ್ತು ತಂಪಾದ ಗಾಳಿಯನ್ನು ಆನಂದಿಸಬಹುದು. ಇದು ಪಕ್ಷಿ ವೀಕ್ಷಣೆಗೆ ಒಳ್ಳೆಯ ಸ್ಥಳವಾಗಿದೆ. ಕೆರೆಯಲ್ಲಿರುವ ನೀರಿನ ಲೆಟಿಸ್‌ಗಳು (ಲೆಟಿಸ್ ಅನ್ನು ಸಸ್ಯಶಾಸ್ತ್ರೀಯವಾಗಿ Lactuca sativa ಎಂದು ಕರೆಯಲಾಗುತ್ತದೆ, ಇದು ಆಸ್ಟರೇಸಿ ಕುಟುಂಬಕ್ಕೆ ಸೇರಿದೆ) ನೀರಿನ ಮೇಲ್ಮೈಯಲ್ಲಿ ಹಾಸಿರುವ ಹಸಿರು ಹುಲ್ಲಿನಂತ ನೋಟವನ್ನು ನೀಡುತ್ತವೆ.
ಈ ಸ್ಥಳವು ನಗರದ ಕಾರ್ಯನಿರತ ಜೀವನದಿಂದ ವಿಶ್ರಾಂತಿ ಪಡೆಯಲು ಪರಿಪೂರ್ಣ ಪ್ರವಾಸ ತಾಣವಾಗಿದೆ. ಇದು ಒಂದು ಶಾಂತ ಮತ್ತು ನೆಮ್ಮದಿಯ ಸ್ಥಳವಾಗಿದ್ದು, ವಿಶ್ರಾಂತಿ ದಿನವನ್ನು ಕಳೆಯಲು ಅತ್ಯುತ್ತಮವಾಗಿದೆ. ಈ ಸ್ಥಳಕ್ಕೆ ಕಾರಿನಲ್ಲಿ ಪ್ರಯಾಣಿಸುವಾಗ ಸುತ್ತಮುತ್ತಲಿನ ಹಸಿರಿನ ನೋಟ ಮನಸ್ಸಿಗೆ ಹಿತವಾಗಿರುತ್ತದೆ. ಇದು ಜನಸಂದಣಿ ಹಾಗೂ ಮಾಲಿನ್ಯ ಕಡಿಮೆ ಇರುವ, ವಾಣಿಜ್ಯೇತರ ಪ್ರಶಾಂತ ಸ್ಥಳವಾಗಿದೆ. ಮಣ್ಣಿನ ಹಾದಿಯಲ್ಲಿ ನಡೆದು ತಾಜಾ ಗಾಳಿಯನ್ನು ಆನಂದಿಸಬಹುದು. ಸೂರ್ಯೋದಯವನ್ನು ವೀಕ್ಷಿಸಲು ಇದು ಅತ್ಯಂತ ಸೂಕ್ತವಾದ ಸ್ಥಳವಾಗಿದೆ.
ಭೇಟಿ ನೀಡಿ





