ಮುತ್ತುರಾಯಸ್ವಾಮಿ ಬೆಟ್ಟ

ಮುತ್ತುರಾಯಸ್ವಾಮಿ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ಬೆಟ್ಟಹಳ್ಳಿ ಕಾವಲು ಗ್ರಾಮದಲ್ಲಿರುವ ಸುಂದರ ಬೆಟ್ಟವಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಮನಮೋಹಕ ದೃಶ್ಯಗಳನ್ನು ಆಸ್ವಾದಿಸಲು ಬಯಸುವವರಿಗೆ ಈ ಬೆಟ್ಟವು ಭೇಟಿ ನೀಡಲೇಬೇಕಾದ ತಾಣವಾಗಿದೆ. ವಾಹನದಲ್ಲಿ ವ್ಯೂ ಪಾಯಿಂಟ್‌ವರೆಗೆ ತಲುಪಬಹುದಾಗಿದ್ದು, ಚಾರಣದ ಅನುಭವವನ್ನು ಬಯಸುವ ಪ್ರಕೃತಿ ಪ್ರಿಯರು ಹಾಗೂ ಸಾಹಸಾಸಕ್ತರಿಗೂ ಇದು ಅತ್ಯುತ್ತಮ ಸ್ಥಳವಾಗಿದೆ.

ಮುತ್ತುರಾಯಸ್ವಾಮಿ ಬೆಟ್ಟದ ದೂರಗಳು

  • ಬೆಂಗಳೂರು – 42 ಕಿ.ಮೀ
  • ರಾಮನಗರ – 40 ಕಿ.ಮೀ
  • ಕನಕಪುರ – 29 ಕಿ.ಮೀ
  • ಹಾರೋಹಳ್ಳಿ – 15 ಕಿ.ಮೀ
  • ಕಗ್ಗಲೀಪುರ – 15 ಕಿ.ಮೀ

ಮುತ್ತುರಾಯಸ್ವಾಮಿ ಬೆಟ್ಟದ ತುದಿಯನ್ನು ಚಾರಣದ ಮೂಲಕ ತಲುಪಬಹುದು ಅಥವಾ ವಾಹನದಲ್ಲಿಯೇ ಮೇಲ್ಭಾಗದವರೆಗೆ ಹೋಗಬಹುದು. ವಾಹನದಿಂದ ತೆರಳುವ ರಸ್ತೆಯ ಜೊತೆಗೆ, ಚಾರಣದ ಆರಂಭಿಕ ಸ್ಥಳದಿಂದ ಕಾಲ್ನಡಿಗೆಯಲ್ಲಿ ಬೆಟ್ಟದ ತುದಿಯವರೆಗೆ ಸಾಗುವ ಹಾದಿಯೂ ಇದೆ. ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ಮುತ್ತುರಾಯ (ಆಂಜನೇಯ) ದೇವಾಲಯವಿದ್ದು, ಅಲ್ಲಿಂದ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯದ ಅದ್ಭುತ ನೋಟವನ್ನು ವೀಕ್ಷಿಸಬಹುದು.

ಭೇಟಿ ನೀಡಿ
ಹಾರೋಹಳ್ಳಿ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section