ಮಡಿವಾಳ ಮಾಚಿದೇವರ ಹೊಂಡವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿದೆ. ಈ ಪವಿತ್ರ ಸ್ಥಳವು ಶರಣ ಸಂಪ್ರದಾಯದ ಮಹಾನ್ ಶರಣರಾದ ಮಡಿವಾಳ ಮಾಚಿದೇವರಿಗೆ ಸಮರ್ಪಿತವಾಗಿದೆ.
12ನೇ ಶತಮಾನದಲ್ಲಿ ಸಮಾಜದಲ್ಲಿ ದುರ್ಬಲರ ಶೋಷಣೆ, ಜಾತಿ-ತಾರತಮ್ಯ, ಅಸ್ಪೃಶ್ಯತೆ, ಮೂಢನಂಬಿಕೆಗಳು, ಹಾಗೂ ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಗಳು ವ್ಯಾಪಕವಾಗಿದ್ದವು. ಈ ಅನ್ಯಾಯದ ವಿರುದ್ಧವಾಗಿ ಸರ್ವರಿಗೂ “ಸಮಪಾಲು – ಸಮಬಾಳು” ಎಂಬ ತತ್ವದ ಮೂಲಕ ಸಮಾನತೆಯ ಸಮಾಜ ನಿರ್ಮಿಸಲು ಶರಣರು ಸಾಮಾಜಿಕ ಕ್ರಾಂತಿಯನ್ನೇ ಪ್ರಾರಂಭಿಸಿದರು.
ಅಂತಹ ಶರಣರ ಅಗ್ರಗಣ್ಯರಲ್ಲಿ ಮಡಿವಾಳ ಮಾಚಿದೇವರು ಪ್ರಮುಖರು. ಅವರು ತಮ್ಮ ಜೀವನದ ಮೂಲಕ ಶ್ರಮನ ಗೌರವ, ಸಮಾನತೆ ಮತ್ತು ಮಾನವ ಸೇವೆಯ ತತ್ವಗಳನ್ನು ಅಳವಡಿಸಿಕೊಂಡು, ಶರಣ ಚಳವಳಿಯ ಇತಿಹಾಸದಲ್ಲಿ ಪ್ರಕಾಶಮಾನ ಸ್ಥಾನವನ್ನು ಪಡೆದಿದ್ದಾರೆ.
ಈ ಸ್ಥಳವು ಬೆಂಗಳೂರಿನಿಂದ 716 ಕಿ.ಮೀ (NH50 ಮೂಲಕ), 730 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 81 ಕಿ.ಮೀ ದೂರದಲ್ಲಿದೆ. ಹಾಗೂ ಬಸವಕಲ್ಯಾಣದಿಂದ 2 ಕಿ.ಮೀ ದೂರದಲ್ಲಿದೆ.
ಶ್ರೀ ಅಲ್ಲಮಪ್ರಭು ಅವರ ಗದ್ದಿಗೆ ಮಠದ ಪಕ್ಕದಿಂದ ಹಿಂದೆ ಹೋದರೆ ಸಿಗುವುದೇ ಮಡಿವಾಳ ಮಾಚಿದೇವರ ಹೊಂಡ. ನಾಲ್ಕು ಕಡೆಯಿಂದ ನೀರಿದ್ದು ಮಧ್ಯದಲ್ಲಿ ಮಡಿವಾಳ ಮಾಚಿದೇವರ ಮಂದಿರವಿದ್ದು ನೀರಿನ ಮಧ್ಯ ರಸ್ತೆ ನಿರ್ಮಾಣ ಮಾಡಿದ್ದೂ, ಅದರ ಮುಖಾಂತರ ಮಂದಿರಕ್ಕೆ ಹೋಗಬಹುದಾಗಿದೆ. ಈ ಹೊಂಡದ ಸುತ್ತ ದೊಡ್ಡ ದೊಡ್ಡ ಮರಗಳು ಬೆಳೆದಿದ್ದು ಪಾದಚಾರಿಗಳಿಗೆ ಸುತ್ತಲೂ ರಸ್ತೆಯೂ ಕೂಡ ಮಾಡಲಾಗಿದೆ. ಈ ಹೊಂಡವು ವಿಹಂಗಮವಾಗಿ ಕಾಣಿಸುತ್ತದೆ. ಇಲ್ಲಿ ಉಪಹಾರ-ಗೃಹ ಮತ್ತು ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಮಾಡಲಾಗಿದೆ. ಈ ಶರಣರು ಮೂಲತಃ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಯವರು.
ಕೆಲವು ಕಾರ್ಯಸೂಚಿಗಳ ಪ್ರಕಾರ ದೇವಾಲಯಗಳನ್ನು ಸಂಪೂರ್ಣವಾಗಿ ಮಾರ್ಪಡಿಸಲಾಗಿದೆ, ಆದರೆ ದೇವಾಲಯದ ಅವಶೇಷಗಳು ಅಲ್ಲಿವೆ, ಇದರಲ್ಲಿ ಶಿವನ ಲಿಂಗ ರೂಪದಲ್ಲಿ ಮಾತ್ರವಲ್ಲದೆ ಮಾನವರೂಪದ ರೂಪದಲ್ಲಿಯೂ, ಹನುಮಂತ ಮತ್ತು ಅನೇಕ ಶಿಲಾಬಾಲಿಕೆಗಳ ಪ್ರತಿಮೆಗಳೂ ಇವೆ.
ಭೇಟಿ ನೀಡಿ



