ಶ್ರೀ ಕಲ್ಬಿಗಿರಿ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ

ಶ್ರೀ ಕಲ್ಬಿಗಿರಿ ಬೆಟ್ಟದ ರಂಗನಾಥಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಪುರಾತನ ದೇವಾಲಯವಾಗಿದೆ. ಈ ದೇವಾಲಯವು ಬೆಟ್ಟದ ಮೇಲ್ಭಾಗದಲ್ಲಿದೆ.

ಶ್ರೀ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಾಲಯದ ದೂರಗಳು

  • ಬೆಂಗಳೂರು – 340 ಕಿ.ಮೀ
  • ದಾವಣಗೆರೆ – 80 ಕಿ.ಮೀ
  • ನ್ಯಾಮತಿ – 18 ಕಿ.ಮೀ

ಶ್ರೀ ಕಲ್ಬಿಗಿರಿ ಶ್ರೀ ರಂಗನಾಥಸ್ವಾಮಿ ದೇವಾಲಯವು ಇತ್ತೀಚೆಗೆ ಜೀರ್ಣೋದ್ಧಾರಗೊಂಡ ಪುರಾತನ ದೇವಾಲಯವಾಗಿದೆ. ಇಲ್ಲಿ ವಿರಾಜಮಾನವಾಗಿರುವ ಅನೇಕ ಪುರಾತನ ಮೂರ್ತಿಗಳು ಅತ್ಯಂತ ಆಕರ್ಷಕವಾಗಿವೆ. ಸುಮಾರು ನಾಲ್ಕರಿಂದ ಐದು ಶತಮಾನಗಳ ಹಿಂದೆಯೇ ಬೆಟ್ಟದ ತುದಿಯಲ್ಲಿ ಇಂತಹ ಭವ್ಯ ದೇವಾಲಯವನ್ನು ನಿರ್ಮಿಸಿದ ರಾಜರ ಶ್ರದ್ಧೆ, ಭಕ್ತಿ ಮತ್ತು ನಂಬಿಕೆ ಅಪಾರವಾಗಿತ್ತು.

ಭೇಟಿ ನೀಡಿ
ನ್ಯಾಮತಿ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ದಾವಣಗೆರೆ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section