ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯ

ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯವು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ಇರುವ ಅರಣ್ಯ ಪ್ರದೇಶವಾಗಿದೆ. ಈ ಅರಣ್ಯ ಪ್ರದೇಶವನ್ನು 2011ರ ಜನವರಿ 10ರಂದು ಅಭಯಾರಣ್ಯವೆಂದು ಘೋಷಿಸಲಾಯಿತು.

ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯದ ದೂರಗಳು

  • ಬೆಂಗಳೂರು – 247 ಕಿ.ಮೀ
  • ದಾವಣಗೆರೆ – 47 ಕಿ.ಮೀ
  • ಜಗಳೂರು – 10 ಕಿ.ಮೀ
  • ದಾವಣಗೆರೆ ರೈಲ್ವೆ ನಿಲ್ದಾಣ – 46 ಕಿ.ಮೀ

ಕೊಂಡುಕುರಿಯು ಸಾಮಾನ್ಯವಾಗಿ ನಾಲ್ಕು ಕೊಂಬುಗಳನ್ನು ಹೊಂದಿರುವ ಅಪರೂಪದ ಜಿಂಕೆ ಜಾತಿಗೆ ಸೇರಿದ ಪ್ರಾಣಿಯಾಗಿದೆ. ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯದಲ್ಲಿ ಅಪರೂಪದ ಜೀವ ವೈವಿಧ್ಯತೆಯನ್ನು ಹೊಂದಿರುವ ನಾಲ್ಕು ಕೊಂಬಿನ ಕೊಂಡುಕುರಿಗಳ ಜೊತೆಗೆ ಚಿರತೆ, ಕಾಡುಹಂದಿ, ಕಿರುಬ, ಚಿಪ್ಪುಹಂದಿ, ನರಿ, ತೋಳ, ಮೊಲಗಳು ಹಾಗೂ ವಿವಿಧ ಹಕ್ಕಿ ಪಕ್ಷಿಗಳೂ ತಮ್ಮ ಜೀವಸಂಕುಲವನ್ನು ವೃದ್ಧಿಸಿಕೊಂಡಿವೆ.

ಭೇಟಿ ನೀಡಿ
ಜಗಳೂರು ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ದಾವಣಗೆರೆ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section