ಭೀಷ್ಮ ಸರೋವರವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ಇದೆ. ಭೀಷ್ಮ ಸರೋವರದ ಪಕ್ಕದಲ್ಲೇ ವಿಶ್ವದ ಅತಿ ದೊಡ್ಡ ಬಸವೇಶ್ವರ ಪ್ರತಿಮೆಯಿದೆ. ಈ ಪ್ರತಿಮೆಯು 116.7 ಅಡಿ ಎತ್ತರದ ಕಾಂಕ್ರೀಟ್‌ನಿಂದ ನಿರ್ಮಿಸಲಾದ ಶಿಲ್ಪವಾಗಿದ್ದು, ಇದರ ಮೇಲ್ಮೈಗೆ ತಾಮ್ರ ಲೋಹದ ಲೇಪನ ಮಾಡಲಾಗಿದೆ.
ಈ ಸ್ಥಳವು ಬೆಂಗಳೂರಿನಿಂದ 416 ಕಿ.ಮೀ ಹಾಗೂ ಗದಗ ನಗರದಿಂದ ಕೇವಲ 1.4 ಕಿ.ಮೀ ದೂರದಲ್ಲಿದೆ.
ಭೀಷ್ಮ ಸರೋವರದಲ್ಲಿ ದೋಣಿ ಸವಾರಿ ವ್ಯವಸ್ಥೆ ಇದ್ದು, ಇದು ಪ್ರವಾಸಿಗರಿಗೆ ಒಂದು ಉತ್ತಮ ಪ್ರವಾಸಿ ತಾಣವಾಗಿದೆ.
ಭೇಟಿ ನೀಡಿ


