ಬಂಕಾಪುರ ಕೋಟೆ ಮತ್ತು ಬಂಕಾಪುರ ನವಿಲು ಅಭಯಾರಣ್ಯ

ಬಂಕಾಪುರ ಕೋಟೆ ಮತ್ತು ಬಂಕಾಪುರ ನವಿಲು ಅಭಯಾರಣ್ಯವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಬಂಕಾಪುರ ಎಂಬ ಪಟ್ಟಣದಲ್ಲಿದೆ. ಬಂಕಾಪುರ ಕೋಟೆಯು ಒಂದು ಪ್ರಮುಖ ಐತಿಹಾಸಿಕ ಸ್ಥಳವಾಗಿದ್ದು, ಬಂಕಾಪುರ ಕೋಟೆಯೊಳಗೆ ನಾಗರೇಶ್ವರ ದೇವಸ್ಥಾನ ಅಥವಾ ಅರವತ್ತು ಕಂಬದ ಗುಡಿ ಎಂದು ಕರೆಯಲ್ಪಡುವ ಚಾಲುಕ್ಯರು ನಿರ್ಮಿಸಿದ ದೇವಾಲಯವಿದೆ. ಕೋಟೆಯಲ್ಲಿ ಸುಂದರವಾದ ಮಸೀದಿಯೂ ಇದೆ. ಈ ಸ್ಥಳವು ಜೈನರಿಗೆ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಜೈನ ಧಾರ್ಮಿಕ ಗ್ರಂಥವಾದ ಆದಿಪುರನ್ ಇಲ್ಲಿ ರಚಿತವಾಗಿದೆ. ಈ ಪ್ರದೇಶದಲ್ಲಿ ಅತಿ ಹೆಚ್ಚು ನವಿಲು ಇರುವ ಸ್ಥಳವಾಗಿದ್ದು, ಐತಿಹಾಸಿಕ ಬಂಕಾಪುರ ಕೋಟೆ ವ್ಯಾಪ್ತಿಗೆ ಸೇರಿದ 139 ಎಕರೆ ಪ್ರದೇಶದಲ್ಲಿ ಈ ನವಿಲುಧಾಮ ಹರಡಿದೆ.

ಈ ಸ್ಥಳವು ಬೆಂಗಳೂರಿನಿಂದ ಸುಮಾರು 361 ಕಿ.ಮೀ ಮತ್ತು ಹುಬ್ಬಳಿಯಿಂದ 78 ಕಿ.ಮೀ ದೂರದಲ್ಲಿದೆ. ಹಾಗೂ ಹಾವೇರಿ ನಗರದಿಂದ 24 ಕಿ.ಮೀ, ಶಿಗ್ಗಾಂವ್ ನಿಂದ 10 ಕಿ.ಮೀ ಮತ್ತು ಹಾವೇರಿ ನಗರ ರೈಲ್ವೆ ನಿಲ್ದಾಣದಿಂದ 25 ಕಿ.ಮೀ ದೂರದಲ್ಲಿದೆ.

ಬಂಕಾಪುರ ಕೋಟೆಯನ್ನು ಬನವಾಸಿಯ ಕದಂಬರು, ಗಂಗರು, ಚೋಳರು, ರಾಷ್ಟ್ರಕೂಟರು, ಹೊಯ್ಸಳರು, ಚಾಲುಕ್ಯರು, ವಿಜಯನಗರದ ರಾಜರು, ಬಿಜಾಪುರದ ಆದಿಲ್ಶಾಹಿ, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಳ್ವಿಕೆ ನಡೆಸಿದರು ಎಂದು ಹೇಳಲಾಗುತ್ತದೆ ಮತ್ತು ಕೋಟೆಯು ಅವರುಗಳ ಅಧೀನದಲ್ಲಿತ್ತು. ವಿಭಿನ್ನ ಕಾಲದ ಕಲಾಕೃತಿಗಳ ಸಂಗ್ರಹವು ಖಂಡಿತವಾಗಿಯೂ ಅದನ್ನು ಸೂಚಿಸುತ್ತದೆ. ಹಲವಾರು ಕದನಗಳಿಂದ ಮತ್ತು ವಿಧ್ವಂಸಕ ಕೃತ್ಯಗಳ ನಡುವೆಯೂ ಪಾಳುಬಿದ್ದ ಕೋಟೆಯು ಅವಶೇಷಗಳಿಂದ ಗುರುತಿಸಬಹುದು.

9ನೇ ಶತಮಾನದಲ್ಲಿ ಬಂಕಾಪುರವನ್ನು ಬಂಕೆಯರಸ ಎಂದು ಹೆಸರಿಸಲಾಯಿತು, ಆ ಸಮಯದಲ್ಲಿ ರಾಷ್ಟ್ರಕೂಟ ರಾಜ ಅಮೋಘವರ್ಷ I ರ ಸಾಮಂತರಾಗಿದ್ದರು. 11 ನೇ ಶತಮಾನದಲ್ಲಿ ಕದಂಬರು ಆಕ್ರಮಿಸಿಕೊಂಡರು, ನಂತರ ಹೊಯ್ಸಳರ ರಾಜ ವಿಷ್ಣುವರ್ಧನ ಆಕ್ರಮಿಸಿಕೊಂಡನು.

ಬಂಕಾಪುರ ಕೋಟೆಯ ಗೋಡೆಗಳನ್ನು ಪರಿಶೀಲಿಸಲು ಮೈದಾನದ ಕಡೆ ಹೊರಟರೆ. ಹಂಗಲ್ ಅನ್ನು ಸಂಪರ್ಕಿಸುವ ಸುರಂಗದ ಪ್ರವೇಶದ್ವಾರದ ಸಣ್ಣ ರಚನೆಯ ಒಂದು ಕಟ್ಟಡವಿದೆ. ಹಳೆಯ ಕುರುಹುಗಳಿಲ್ಲದೆ ಬಾವಲಿಗಳ ಗೂಡಾಗಿದೆ. ಕೋಟೆಯ ಗೋಡೆಯು ಹೆಚ್ಚು ಮಣ್ಣಿನ ಗುಡ್ಡ ಮತ್ತು ಕಂದಕವು ಜಾಲಿಗಿಡದಿಂದ ದಟ್ಟವಾಗಿ ಮುಚ್ಚಲ್ಪಟ್ಟಿದೆ. ಈ ಕಲ್ಲಿನ ಚಪ್ಪಡಿಗಳ ಮೇಲೆ ಹಳೆಗನ್ನಡ ಶಾಸನವಿದೆ. ಉದ್ಯಾನವು ಪ್ರಾಚೀನ ಕಲ್ಲಿನ ಶಿಲ್ಪಗಳ ಸಣ್ಣ ಸಂಗ್ರಹವನ್ನು ಹೊಂದಿದೆ. ಇದು ಹಿಂದೂ ಮತ್ತು ಇಸ್ಲಾಮಿಕ್ ಕಲಾಕೃತಿಗಳ ಮಿಶ್ರಣವಾಗಿದೆ.

ಮಧ್ಯಕಾಲೀನ ಕಾಲದ ಪ್ರಮುಖ ಕೋಟೆಗಳಲ್ಲಿ ಬಂಕಾಪುರ ಕೋಟೆಯನ್ನು ಕರ್ನಾಟಕ ಪ್ರದೇಶದ ಪ್ರಮುಖ ಕೋಟೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 1963ರಲ್ಲಿ ಕೇಂದ್ರ ಸರ್ಕಾರ ನವಿಲನ್ನು ರಾಷ್ಟ್ರೀಯ ಪಕ್ಷಿ ಎಂದು ಘೋಷಿಸಿದ ಬಳಿಕ, 1972ರ ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಈ ನವಿಲುಧಾಮ ಅಸ್ತಿತ್ವಕ್ಕೆ ಬಂದಿದೆ. ಬಂಕಾಪುರ ನವಿಲು ಅಭಯಾರಣ್ಯವು 2001ರಲ್ಲಿ ಕೇಂದ್ರ ಸರ್ಕಾರ ಇದನ್ನು ಅಧಿಕೃತವಾಗಿ ನವಿಲುಧಾಮ ಎಂಬುದಾಗಿ ಘೋಷಣೆ ಮಾಡಿತು. ದೇಶದಲ್ಲಿರುವ ಎರಡು ನವಿಲುಧಾಮಗಳ ಪೈಕಿ ಇದು ಒಂದು. ಇನ್ನೊಂದು ನವಿಲುಧಾಮ ಹರಿಯಾಣದಲ್ಲಿದೆ.

ಬಂಕಾಪುರ ನವಿಲು ಅಭಯಾರಣ್ಯಕ್ಕೆ ಭೇಟಿ ನೀಡಲು ಯಾವುದೇ ನಿರ್ದಿಷ್ಟ ಸಮಯವಿಲ್ಲ ಹಾಗು ಯಾವುದೇ ಪ್ರವೇಶ ಶುಲ್ಕವಿಲ್ಲ.

ಭೇಟಿ ನೀಡಿ
ಶಿಗ್ಗಾಂವ್ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾವೇರಿ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section