ಬಿಲ್ಲೇಶ್ವರ ದೇವಸ್ಥಾನ

ಹೊಯ್ಸಳ ಶೈಲಿಯಲ್ಲಿ ಇರುವ ಪುರಾತನ ಶ್ರೀ ಬಿಲ್ಲೇಶ್ವರ ಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಹಾನಗಲ್ ಹೊರವಲಯದಲ್ಲಿದೆ.ಈ ದೇವಾಲಯವು ಸಂರಕ್ಷಿತ ಸ್ಮಾರಕವಾಗಿದೆ ಮತ್ತು ಇದು ಮುಖ್ಯ ರಸ್ತೆಯಿಂದ ಸ್ವಲ್ಪ ದೂರದಲ್ಲಿದೆ.

ಈ ದೇವಾಲಯವು ಬೆಂಗಳೂರಿನಿಂದ ಸುಮಾರು 370 ಕಿ.ಮೀ ಮತ್ತು ಹುಬ್ಬಳಿಯಿಂದ 74 ಕಿ.ಮೀ ದೂರದಲ್ಲಿದೆ. ಹಾಗೂ ಹಾನಗಲ್ ನಿಂದ 3 ಕಿ.ಮೀ ಮತ್ತು ಹಾವೇರಿ ನಗರ ರೈಲ್ವೆ ನಿಲ್ದಾಣದಿಂದ ಕೇವಲ 37 ಕಿ.ಮೀ ದೂರದಲ್ಲಿದೆ.

ಬಿಲ್ಲೇಶ್ವರ ದೇವಾಲಯದ ಗರ್ಭಗೃಹ ಮಾತ್ರ ಉಳಿದಿದ್ದು 5 ಅಡಿ ಎತ್ತರದ ಶಿವಅಂಗವು ಚಾಳುಕ್ಯರಿಗಿಂತ ಪೂರ್ವದ್ದಾಗಿರುತ್ತದೆ. ಗರ್ಭಗೃಹದ ಛಾವಣಿಯಲ್ಲಿ ನಾಲ್ಕು ಸುತ್ತಿನ ಕಮಲದ ಅಲಂಕಾರವಿದೆ. ಗರ್ಭಗೃಹದ ದ್ವಾರಬಂಧವು ಪಂಚಶಾಖಾಲಂಕೃತವಾಗಿದ್ದು ಸುಂದರವಾಗಿ ಕೆತ್ತಲ್ಪಟ್ಟಿದೆ. ಇದರ ಲಲಾಟದಲ್ಲಿ ದೊಡ್ಡ ಗಜಲಕ್ಷ್ಮಿಯ ಶಿಲ್ಪವಿದೆ. ದೇವಾಲಯದ ಮುಂದಿನ ಚಂದ್ರಶಿಲೆ ಬಹು ಸುಂದರವಾಗಿದೆ. ಈ ದೇವಾಲಯದ ಗರ್ಭಗುಡಿಯ ಬಾಗಿಲಿನ ಚೌಕಟ್ಟಿನಲ್ಲಿ ಜಾಂಬ್‌ಗಳನ್ನು ವಿಸ್ತಾರವಾಗಿ ಕೆತ್ತಲಾಗಿದೆ. ಪ್ರತಿ ಬದಿಯ ಕೆಳಭಾಗದಲ್ಲಿ ಐದು ಕೆತ್ತಿದ ಚಿತ್ರಗಳಿವೆ. ಮನ್ಮಥ ಕೇಂದ್ರ ಪ್ರಕ್ಷೇಪಣದಲ್ಲಿದೆ ಮತ್ತು ರತಿ ಅವನ ಪಕ್ಕದಲ್ಲಿದ್ದಾಳೆ. ದಕ್ಷ (ಮೇಕೆ ತಲೆಯ ದೇವತೆ) ಸಹ ಇದ್ದು ಮತ್ತು ಎಲ್ಲರೂ ಪರಿಚಾರಕರಿಂದ ಸುತ್ತುವರಿದಿದ್ದಾರೆ.

ದೇವಾಲಯದ ಹೊರಗೋಡೆಗಳನ್ನು ದೇವಾಲಯದ ಗೋಪುರಗಳ ವಿನ್ಯಾಸಗಳು ಮತ್ತು ಕೆತ್ತಿದ ವಜ್ರದ ಆಕಾರದ ತಗ್ಗುಗಳಿಂದ ಅಲಂಕರಿಸಲಾಗಿದೆ. ಚೌಕಾಕಾರದ ಫಲಕಗಳು ಹೆಣೆದುಕೊಂಡಿರುವ ಬಾಲಗಳು, ಪ್ರಾಣಿಗಳು, ಸಂಗೀತಗಾರರು ಮತ್ತು ಎಲೆಗೊಂಚಲುಗಳೊಂದಿಗೆ ಕೆತ್ತಿದ ಸರ್ಪಗಳನ್ನು ತೋರಿಸುತ್ತವೆ. ಈ ದೇವಾಲಯವು ಭಾರತೀಯ ಪುರಾತತ್ವ ಸಮೀಕ್ಷೆಯ ಪಟ್ಟಿ ಮಾಡಲಾದ ಸ್ಮಾರಕವಾಗಿದೆ.

ಹಾನಗಲ್ ಕದಂಬರ ಒಂದು ಶಾಖೆಯ ರಾಜಧಾನಿಯಾಗಿತ್ತು. ಕ್ತಿ. ಶ. 1068 ರಿಂದ 1203 ರವರೆಗೆ ಆಳಿದ ಹಾನಗಲ್ ಕದಂಬ ಮನೆತನದ ರಾಜರು ಬಹಳ ಕಾಲ ಕಲ್ಯಾಣದ ಚಾಳುಕ್ಯರ ಮಾಂಚಲಕರಾಗಿ ಈ ಊರಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಹೊಯ್ಸಳ ವೀರಬಲ್ಲಾಳನ ಕ್ರಿ.ಶ. 1197 ರಲ್ಲಿ ಕದಂಬ ಕಾಮದೇವನ ಕಾಲಕ್ಕೆ ಹಾನಗಲ್‌ ಮೇಲೆ ದಾಳಿ ಮಾಡಿ ಇಲ್ಲಿಯ ಆನೆಯ ಕರೆಯ ಹತ್ತಿರ ಬೀಡದ್ದನೆಂದು ತಿಳಿದು ಬರುತ್ತದೆ. ನಂತರ ಕೆಲ ಕಾಲ ಹಾನಗಲು ಹೊಯ್ಸಳರ ಆಧಿಪತ್ಯಕ್ಕೆ ಒಳ್ಳಪಟ್ಟಿತು.

ಭೇಟಿ ನೀಡಿ
ಹಾನಗಲ್ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾವೇರಿ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section