ಸಂಗಮೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿರುವ ಹೊಳೆಆನ್ವೇರಿ ಎಂಬ ಒಂದು ಸಣ್ಣ ಹಳ್ಳಿಯಲ್ಲಿರುವ ದೇವಾಲಯವಾಗಿದೆ. ಶಿವನಿಗೆ ಸಮರ್ಪಿತವಾಗಿರುವ ಸಂಗಮೇಶ್ವರ ದೇವಾಲಯವು 11 ನೇ ಶತಮಾನದ ಹೊಯ್ಸಳರ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ ಸುಮಾರು 297 ಕಿ.ಮೀ ಮತ್ತು ಹುಬ್ಬಳಿಯಿಂದ 125 ಕಿ.ಮೀ ದೂರದಲ್ಲಿದೆ. ಹಾಗೂ ಹಾವೇರಿ ನಗರದಿಂದ 50 ಕಿ.ಮೀ ಮತ್ತು ಹರಿಹರ ರೈಲ್ವೆ ನಿಲ್ದಾಣದಿಂದ ಕೇವಲ 20 ಕಿ.ಮೀ ದೂರದಲ್ಲಿದೆ.
ಸಂಗಮೇಶ್ವರ ದೇವಾಲಯ ಪುರಾತನ ಯಾತ್ರಾ ಸ್ಥಳವಾಗಿದೆ. ಈ ದೇವಾಲಯವು ಎರಡು ಪ್ರಮುಖ ನದಿಗಳಾದ ತುಂಗಭದ್ರಾ ಮತ್ತು ಕುಮದ್ವತಿಯ ಕೂಡಲ ಸಂಗಮದ ಸ್ಥಳವಾಗಿದೆ. ಅಮರಶಿಲ್ಪಿ ಜಕಣಾಚಾರಿ ಕಾಲದಲ್ಲಿ ನಿರ್ಮಿಸಿದ ಕೂಡಲ ಸಂಗಮೇಶ್ವರ ದೇವಾಲಯ ಅವರ ಸುಂದರ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದೆ. ದೇವಾಲಯದ ಸುತ್ತಲೂ ಸುಂದರವಾದ ಕೆತ್ತನೆಗಳನ್ನು ಹೊಂದಿರುವ ಪ್ರಾಚೀನ ದೇವಾಲಯ.
ಭೇಟಿ ನೀಡಿ








