ಸರ್ವೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನಲ್ಲಿರುವ ನೆರೆಗಾಲ್ ಎಂಬ ಹಳ್ಳಿಯಲ್ಲಿರುವ ದೇವಾಲಯವಾಗಿದೆ. ಶಿವನಿಗೆ ಸಮರ್ಪಿತವಾಗಿರುವ ಸರ್ವೇಶ್ವರ ದೇವಾಲಯವು 11 ನೇ ಶತಮಾನದ ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ ಸುಮಾರು 353 ಕಿ.ಮೀ ಮತ್ತು ಹುಬ್ಬಳಿಯಿಂದ 69 ಕಿ.ಮೀ ದೂರದಲ್ಲಿದೆ. ಹಾಗೂ ಹಾವೇರಿ ನಗರದಿಂದ 18 ಕಿ.ಮೀ ಮತ್ತು ಹಾವೇರಿ ರೈಲ್ವೆ ನಿಲ್ದಾಣದಿಂದ 19 ಕಿ.ಮೀ ದೂರದಲ್ಲಿದೆ.
ಕಲ್ಯಾಣ ಚಾಲುಕ್ಯರ ಶೈಲಿಯ ಕ್ರಿ.ಶ. ಸು. 11-12ನೇಯ ಶತಮಾನದ ಈ ದೇವಾಲಯವು ಪೂರ್ವಮುಖವಾಗಿ ಕಟ್ಟಲಾಗಿದೆ. ಈ ದೇವಾಲಯ ತಳವಿನ್ಯಾಸದಲ್ಲಿ ಗರ್ಭಗೃಹ, ಅಂತರಾಳ ಮತ್ತು ತೆರೆದ ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಶಿವಅಂಗವಿದ್ದು, ಗರ್ಭಗೃಹ ದ್ವಾರದ ಲಲಾಟಂಬದಲ್ಲಿ ಗಜಲಕ್ಷ್ಮಿ, ಶಿಲ್ಪ ಹಾಗೂ ಅಂತರಾಳ ದ್ವಾರದ ಲಲಾಟಂಬದಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣುವಿನ ಉಬ್ಬುಶಿಲ್ಪಗಳವೆ, ಬಾಗಿಲುವಾಡಕ್ಕೆ ಸೇರಿದಂತೆ ಜಾಲಂದ್ರಗಳುಂಟು ಆಯತಾಕಾರದ ಸಭಾಮಂಟಪವು ಕಕ್ಷಾಸನದಿಂದ ಕೂಡಿದ್ದು, ಚಾವಣೆಯು ಎರ ಕಡೆ ದೀರ್ಘ ಇಳಜಾರಿನಿಂದ ಕೂಡಿದೆ. ಈ ದೀರ್ಘ ಇಳಜಾರಿನ ರಚನೆ, ಹಂಚಿನ ಮನೆಯ ಚಾವಣಿ ರಚನೆಯನ್ನು ಹೋಲುತ್ತದೆ. ಈ ರೀತಿ ದೇವಾಲಯದ ನಿರ್ಮಾಣದಲ್ಲಿ ಸ್ಥಳೀಯ (ಶೈಯನ್ನು ಅಳವಡಿಸಿಕೊಂಡಿರುವುದು ಗಮನರ್ಹ. ನೆಲದಲ್ಲಿ ಉದ್ದಕ್ಕೂ ಮೂರು ಶಿಲಾವೇದಿಕೆಗಳವೆ. ಇದನ್ನು ಉತ್ತರ, ದಕ್ಷಿಣ ಮತ್ತು ಪೂರ್ವ ಭಾಗಗಳಿಂದ ಪ್ರವೇಶಿಸ ಬಹುದು. ಅಧಿಷ್ಠಾನದ ಪೂರ್ವ ಪ್ರವೇಶ ದ್ವಾರದವರೆಗಿನ ತೆರೆದ ಸಭಾಮಂಟಪದ ಇಳಿಜಾರು ಚಾವಣಿ ರಚನೆಯು ವಿಶಿಷ್ಟವಾಗಿದೆ.
ಸಭಾಮಂಟಪದ ಆಗ್ನೇಯ ತುದಿಗೆ ನಾಲ್ಕು ಅಡಿ ಎತ್ತರದ ಸರಸ್ವತಿಯ ಸುಂದರ ಶಿಲ್ಪವಿದೆ. ಈ ಗುಡಿಯ ಗರ್ಭಗೃಹವನ್ನು ಕದಂಬ ಸಾಗರ ಶಿಖರವು ಆಲಂಕರಿಸಿದೆ. ಸಭಾಮಂಟಪದ ತೊಲೆಗಳಲ್ಲಿರುವ ಶಾಸನಗಳು ಮೂಲಸ್ಥಾನ ದೇವರಿಗೆ ಪಟ್ಟ ದತ್ತಿಯನ್ನು ಹಾಗೂ ಸೂರ್ಯ ದೇವಾಲಯದ ನಿರ್ಮಾಣ ಮತ್ತು ದಾನವನ್ನು ತಿಳಿಸುತ್ತದೆ. ಹೊರಗಿರುವ ಶಾಸನದಲ್ಲಿ ನರೆಲ್ಲದಲ್ಲಿ ಈಶ್ವರ ದೇವಾಲಯ ನಿರ್ಮಿಸಿದ ಬಗ್ಗೆ ಉಲ್ಲೇಖವಿದೆ.
ಭೇಟಿ ನೀಡಿ





