ಶ್ರೀ ಗಾಯತ್ರಿ ತಪೋಭೂಮಿಯು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು ತಡಸ್ ಎಂಬ ಗ್ರಾಮದ ಮುತ್ತಳ್ಳಿಯಲ್ಲಿ ಇದೆ. ಗಾಯತ್ರಿ ದೇವಿಗೆ ಎಂದೂ ನಿರ್ಮಿಸಲಾದ ಭವ್ಯ ಆಲಯವಾಗಿದೆ. ದಕ್ಷಿಣ ಭಾರತದಲ್ಲಿ ನಿರ್ಮಿತವಾದ ಏಕೈಕ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ ಸುಮಾರು 388 ಕಿ.ಮೀ ಮತ್ತು ಹಾವೇರಿಯಿಂದ 52 ಕಿ.ಮೀ ದೂರದಲ್ಲಿದೆ ಹಾಗೂ ತಡಸ್ ನಿಂದ 06 ಕಿ.ಮೀ ಮತ್ತು ಹಾವೇರಿ ರೈಲ್ವೆ ನಿಲ್ದಾಣದಿಂದ 53 ಕಿ.ಮೀ ದೂರದಲ್ಲಿದೆ.
ಸುಂದರವಾದ ಗರ್ಭಗುಡಿ ಯಲ್ಲಿ ತಾಯಿ ಗಾಯತ್ರಿ ದೇವಿಯ ಕಪ್ಪು ವರ್ಣದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ದೇವರು ಸುಕೋಮಲ ಹಾಗು ಮಂದಸ್ಮಿತವಾದ 5 ಮುಖಗಳನ್ನು ಹೊತ್ತು, ಅಭಯ ಹಸ್ತ ಹಿಡಿದು ಬರುವ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ. ಇಲ್ಲಿ ಗಾಯತ್ರಿ ದೇವಿಯ ಜೊತೆಗೆ ಗಣೇಶ, ಸ್ಕಂದ ಹಾಗು ಅನ್ನಪೂರ್ಣೇಶ್ವರಿ ದೇವಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.
ಭೇಟಿ ನೀಡಿ




