ಅವನಿ ಬೆಟ್ಟವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಮುಳುಬಾಗಿಲು ತಾಲೂಕಿನಲ್ಲಿ ಇರುವ ಪೌರಾಣಿಕ ಬೆಟ್ಟವಾಗಿದೆ ಹಾಗೂ ಬೆಟ್ಟದ ಮೇಲೆಯೂ ಇರುವ ಅನೇಕ ದೇವಾಲಯಗಳು ಮತ್ತು ಶಿಲಾಶಾಸನಗಳು ಇದರ ಪ್ರಾಚೀನ ಪ್ರಾಮುಖ್ಯವನ್ನು ಸಾರುತ್ತವೆ. ಈ ಊರಿಗೆ ಮೊದಲು ಅಹವನೀಯ, ಆವಣ್ಯ, ಆವಣೆ ಎಂಬ ಹೆಸರುಗಳು ಇತ್ತು ಎಂದು ಶಾಸನಗಳಿಂದ ತಿಳಿದುಬರುತ್ತದೆ. ಈ ಬೆಟ್ಟವು ಪೌರಾಣಿಕ ಸ್ಥಳದ ಜೊತೆಗೆ ಒಂದು ಸುಂದರ ಚಾರಣಿಗ ಸ್ಥಳವು ಕೂಡ ಆಗಿದೆ.
ಈ ಸ್ಥಳವು ಬೆಂಗಳೂರಿಂದ 93 ಕಿ.ಮೀ ಮತ್ತು ಕೋಲಾರದಿಂದ 30 ಕಿ.ಮೀ ದೂರದಲ್ಲಿದೆ. ಹಾಗೂ ಮುಳುಬಾಗಿಲುನಿಂದ 14 ಕಿ.ಮೀ ಮತ್ತು ಕೋಲಾರದ ಕನಕನಪಾಳ್ಯ ರೈಲ್ವೆ ನಿಲ್ದಾಣದಿಂದ 30 ಕಿ.ಮೀ ದೂರದಲ್ಲಿದೆ.
ಈ ಸ್ಥಳವು ಅತ್ಯಂತ ಪ್ರಾಚೀನವಾದ ಸ್ಥಳವಾಗಿದೆ. ಈ ಸ್ಥಳವು ರಾಮಾಯಣದ ಕಾಲದ ಇತಿಹಾಸಕ್ಕೆ ಸಂಬಂಧ ಹೊಂದಿರುವಂತ ಸ್ಥಳವಾಗಿದೆ ಹಾಗೂ ಭಾರತದ ಅತ್ಯಂತ ಪುಣ್ಯಕ್ಷೇತ್ರಗಳಲ್ಲಿ ಒಂದು. ಈ ಬೆಟ್ಟವು ಪುರಾಣಗಳಿಂದ ತುಂಬಿದೆ. ದಂತಕಥೆಯ ಪ್ರಕಾರ, ಈ ಬೆಟ್ಟವು ಒಂದು ಕಾಲದಲ್ಲಿ ರಾಮಾಯಣದ ಪೂಜ್ಯ ಲೇಖಕ ವಾಲ್ಮೀಕಿ ಋಷಿಯ ವಾಸಸ್ಥಾನವಾಗಿತ್ತು. ರಾಮನ ಪತ್ನಿ ಸೀತೆ ಅವನಿಯಲ್ಲಿ ತನ್ನ ಅವಳಿ ಮಕ್ಕಳಾದ ಲವ ಮತ್ತು ಕುಶರಿಗೆ ಜನ್ಮ ನೀಡಿದಳು ಎಂದು ಹೇಳಲಾಗುತ್ತದೆ. ಈ ಬೆಟ್ಟವು ಸೀತೆ ಅಶ್ವಮೇಧ ಯಜ್ಞವನ್ನು ಮಾಡಿದ ಸ್ಥಳವಾಗಿದೆ ಎಂದು ನಂಬಲಾಗಿದೆ.
ಬೆಟ್ಟದ ಮೇಲೆ ಪಂಚ ಪಾಂಡವರ ದೇವಾಲಯ ( ಈ ಗರ್ಭಗುಡಿಯಲ್ಲಿ ೦೫ ಲಿಂಗಗಳಿವೆ. ಈ ಲಿಂಗಗಳನ್ನೂ ಪಾಂಡವರ ಸಹೋದರರು ನಿರ್ಮಿಸಿದರೆ ಎಂದು ಪೌರಾಣಿಕ ಹಿನ್ನಲೆ ಹೇಳುತ್ತದೆ), ಏಕಾಂತ ರಾಮಸ್ವಾಮಿ ಮಂದಿರ, ವಾಲ್ಮೀಕಿ ಆಶ್ರಮ, ತಾಯಿ ಮನೆ ( ಜೋಡಿ ಲಿಂಗ ಇರುವ ಗುಹೆ ಮನೆ ), ಸೀತಾದೇವಿ ನಿಲಯ (ಸೀತ ದೇವಿ ದೇವಾಲಯ ಇರುವ ಏಕೈಕ ದೇವಾಲಯ), ಸೀತ ರಾಮ ವಿಶ್ರಾಂತಿಧಾಮ ಮತ್ತು ಸೀತ ದೇವಿಯು ಅಗ್ನಿ ಪ್ರವೇಶ ಮಾಡಿದ ಸ್ಥಳ ಇದೆ.
ಭೇಟಿ ನೀಡಿ






