ಬೆಳ್ಳಿ ಬೆಟ್ಟ ಕೋಡಿಹಳ್ಳಿಯು ಕರ್ನಾಟಕ ರಾಜ್ಯದ ಕೋಲಾರದ ಕೋಡಿಹಳ್ಳಿ ಗ್ರಾಮದಲ್ಲಿ ಅಜ್ಞಾತ ಮತ್ತು ಅತಿ ಸ್ವರ್ಗೀಯ ಬಿಳಿ ಬೆಟ್ಟ ಬೆಟ್ಟವು ನೆಲೆಗೊಂಡಿದೆ.
ಈ ಬೆಟ್ಟವು ಬೆಂಗಳೂರಿಂದ 63 ಕಿ.ಮೀ ಮತ್ತು ಕೋಲಾರದಿಂದ 15 ಕಿ.ಮೀ ದೂರದಲ್ಲಿದೆ. ಹಾಗೂ ಕೋಲಾರದ ಕನಕನಪಾಳ್ಯ ರೈಲ್ವೆ ನಿಲ್ದಾಣದಿಂದ 16 ಕಿ.ಮೀ ದೂರದಲ್ಲಿದೆ.
ಈ ಬೆಟ್ಟ ಮೇಲೆ ಶ್ರೀ ರಾಮ, ಸೀತಾ ಮಾತೆ ತಂಗಿದ್ದ ಸ್ಥಳವಾಗಿದೆ. ಬೆಟ್ಟದ ಮೇಲೆ ಶ್ರೀ ಆಂಜನೇಯ ಸ್ವಾಮಿ ಉದ್ಭವ ಮೂರ್ತಿ ದೇವಾಲಯವು ಮೇಲ್ಭಾಗದಲ್ಲಿದೆ. ಶ್ರೀ ನಾಗರ ದೇವರ ದೇವಸ್ಥಾನ, ಶ್ರೀ ಗಣಪತಿ ದೇವಸ್ಥಾನ, ಶ್ರೀ ಅನಪೂರ್ಣೇಶ್ವರಿ ದೇವಸ್ಥಾನ ಮತ್ತು ಶ್ರೀ ಸೀತಾ ಮಾತೆ ತೋಟಿಲು ಇಲ್ಲಿವೆ. ಬೆಟ್ಟದ ಕೆಳಭಾಗಕ್ಕೆ ಹೋಗುವ ಕಾಡಿನ ನಡುವೆ ಮಣ್ಣಿನ ರಸ್ತೆ ಇದೆ. ಅಲ್ಲಿಂದ ಬೆಟ್ಟದ ತುದಿಯವರೆಗೆ ಕಲ್ಲಿನ ಮೆಟ್ಟಿಲುಗಳಿವೆ. ಈ ಬೆಟ್ಟದ ಎದುರು ಶ್ರೀ ವಕ್ಕಲೇರಿ ಮಾರ್ಕಂಡೇಶ್ವರ ಸ್ವಾಮಿ ಬೆಟ್ಟದ ನೋಟ ಕಾಣುತ್ತದೆ. ಮೇಲಿನಿಂದ ಕಾಣುವ ನೋಟ ವಿಶೇಷವಾಗಿದೆ.
ಭೇಟಿ ನೀಡಿ









