ಬೂದಿಕೋಟೆ ಕೋಟೆ ಮತ್ತು ಹೈದರಾಲಿಯ ಜನ್ಮಸ್ಥಳ

ಬೂದಿಕೋಟೆ ಕೋಟೆ ಮತ್ತು ಹೈದರಾಲಿಯ ಜನ್ಮಸ್ಥಳವು ಕರ್ನಾಟಕ ರಾಜ್ಯದ ಕೋಲಾರದ ಜಿಲ್ಲೆಯ ಬಂಗಾರಪೇಟೆ ಬೂದಿಕೋಟೆಯಲ್ಲಿ ಇರುವ ಸ್ಥಳವಾಗಿದೆ. ಈ ಸ್ಥಳವು ಟಿಪ್ಪು ಸುಲ್ತಾನನ ತಂದೆ ಹೈದರಾಲಿಯ ಜನ ಸ್ಥಳವಾಗಿದೆ. ಮೊದಲು ಈ ಸ್ಥಳಕ್ಕೆ ವಿಭೂತಿಪುರ ಎಂದು ಕರೆಯುತಿದ್ದರು.

ಈ ಸ್ಥಳವು ಬೆಂಗಳೂರಿಂದ 78 ಕಿ.ಮೀ ಮತ್ತು ಕೋಲಾರದಿಂದ 30 ಕಿ.ಮೀ ದೂರದಲ್ಲಿದೆ. ಹಾಗೂ ಬಂಗಾರಪೇಟೆ ಯಿಂದ 13 ಕಿ.ಮೀ ದೂರದಲ್ಲಿದೆ.

ಬೂದಿಕೋಟೆಯು 17 ನೇ ಶತಮಾನದಲ್ಲಿ ಶಿರಾ ಸುಭೇದಾರನ ಕೆಳೆಗೆ ಪೌಜುದಾರನಾಗಿದ್ದ ಫತೇಮಹಮ್ಮದನ ಜಹಗೀರಿಯಾಗಿತ್ತು ಮತ್ತು ಈತನ ಮಗ ಹೈದರಾಲಿ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ರ ತಂದೆ ಮೈಸೂರು ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ ಹೈದರಾಲಿಯ ಜನ್ಮಸ್ಠಳ. ಇವರು 1720 ರಲ್ಲಿ ಇಲ್ಲಿ ಜನಿಸಿದರು.

ಬೂದಿಕೋಟೆಯಲ್ಲಿ ಶಿಥಿಲವಾದ ಕೋಟೆಗಳ ಅವಶೇಷಗಳಿವೆ. ಈ ಕೋಟೆಯೊಳಗೆ ಅನೇಕ ದೇವಾಲಯಗಳು ಸಹ ಇವೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಉಸ್ತುವಾರಿಯಲ್ಲಿರುವ ಬೂದಿಕೋಟೆಯ ಕೋಟೆಯೊಳಗೆ ಕಲ್ಲಿನಲ್ಲಿ ಕೆತ್ತಿದಂತಹ ಆಂಜನೇಯ ಸ್ವಾಮಿಯ ದೇವಾಲಯ ಮತ್ತು ಕೋಟೆವೇಣುಗೋಪಾಲಸ್ವಾಮಿಯ ಆಲಯವಿದೆ ಇದು ಶಿಥಿಲವಾಗಿದ್ದು ಇತ್ತೀಚೆಗೆ ಊರಿನ ಗ್ರಾಮಸ್ಥರು ಸುಂದರಗೊಳಿಸಿದ್ದಾರೆ. ಹೈದರಾಲಿಯ ಜನ್ಮಸ್ಥಳದಲ್ಲಿ ಸ್ಮಾರಕವೊಂದಿದೆ.

ಬೂದಿಕೋಟೆ ಎಂಬ ಸ್ಥಳವನ್ನು ಮೊದಲು ವಿಭೂತಿಪುರ ಎಂದು ಕರೆಯಲಾಗುತ್ತಿತ್ತು. ಇದರ ಹಿಂದೆ ವಿಶೇಷವಾದ ಐತಿಹಾಸಿಕ ಹಿನ್ನೆಲೆ ಕೂಡ ಇದೆ. ಆ ಕಾಲದಲ್ಲಿ ಈ ಪ್ರದೇಶದಲ್ಲಿ ಋಷಿ ಮುನಿಗಳು ಯಾಗ-ಯಜ್ಞಗಳನ್ನು ನಿರಂತರವಾಗಿ ನಡೆಸುತ್ತಿದ್ದರು. ಈ ಧಾರ್ಮಿಕ ಚಟುವಟಿಕೆಗಳ ಫಲವಾಗಿ ಎಲ್ಲಾ ಕಡೆ ಬೂದಿ ಹರಡಿಕೊಂಡಿರುತ್ತಿತ್ತು. ಈ ಕಾರಣದಿಂದಲೇ ಈ ಪ್ರದೇಶಕ್ಕೆ ವಿಭೂತಿಪುರ ಎಂಬ ಹೆಸರು ಬಂದಿತು “ವಿಭೂತಿ” ಎಂದರೆ ಬೂದಿ.

ನಂತರದ ದಿನಗಳಲ್ಲಿ, ಈ ಪ್ರದೇಶದಲ್ಲಿ ಹೈದರಾಲಿಯ ಆಳ್ವಿಕೆಯಲ್ಲಿ ಕೋಟೆ ನಿರ್ಮಾಣವಾಯಿತು. ಹೀಗಾಗಿ, ನಂತರದ ದಿನಗಳಲ್ಲಿ ವಿಭೂತಿಪುರದಲ್ಲಿ ಬೂದಿ ಯನ್ನು ತೆಗೆದುಕೊಂಡು ಹಾಗೂ ಹೈದರಾಲಿಯ ಕೋಟೆ ಇದ್ದದ್ದರಿಂದ ಇಲ್ಲಿ ಕೋಟೆ ಯನ್ನು ತೆಗೆದುಕೊಂಡು ಬೂದಿಕೋಟೆ ಅಂತ ನಾಮಕರಣ ಮಾಡಿದರು. ಅಂದಿನಿಂದ ಬೂದಿಕೋಟೆಯಾಗಿ ಕರೆಯಲ್ಪಡುತ್ತಿದೆ.

ಭೇಟಿ ನೀಡಿ
ಬಂಗಾರಪೇಟೆ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಕೋಲಾರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section