ಆವನಿಯಲ್ಲಿ ಇರುವ ರಾಮಲಿಂಗೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನಲ್ಲಿ ಇರುವ ಒಂದು ಐತಿಹಾಸಿಕ ದೇವಾಲಯವಾಗಿದೆ. ಮಕ್ಕಳ ಮೇಲೆ ಯುದ್ಧ ಮಾಡಿದ್ದ ಪ್ರಾಯಶ್ಚಿತ್ತಕಾಗಿ ಮಹರ್ಷಿ ವಾಲ್ಮೀಕಿಯ ಮಾರ್ಗದರ್ಶನದಂತೆ ರಾಮ ಮತ್ತು ಅವನ ಸಹೋದರರು ಇಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದರು. ಆ ಕಾರಣದಿಂದ ಈ ಸ್ಥಳಕ್ಕೆ ರಾಮಲಿಂಗೇಶ್ವರ ದೇವಾಲಯ ಎಂದು ಕರೆಯುತ್ತಾರೆ. ಈ ದೇವಾಲಯ ಸಂಕೀರ್ಣವು ಹಲವಾರು ದೇವಾಲಯಗಳನ್ನು ಹೊಂದಿದೆ.
ಈ ಸಂಕೀರ್ಣವು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಭಾರತೀಯ ಪುರಾತತ್ವ ಇಲಾಖೆಯ ದಾಖಲೆಗಳ (ASI) ಪ್ರಕಾರ, ಈ ದೇವಾಲಯವು 10ನೇ ಶತಮಾನದ ನೊಳಂಬ ರಾಜವಂಶದ ಅಲಂಕೃತ ನಿರ್ಮಾಣವಾಗಿದೆ, ಇದನ್ನು ಚೋಳ ರಾಜವಂಶದಿಂದ ಭಾಗಶಃ ನವೀಕರಿಸಲಾಯಿತು. ವಿಜಯನಗರ ರಾಜರು ಮುಖ್ಯ ಮಂಟಪ ಮತ್ತು ರಾಜಗೋಪುರವನ್ನು ನಿರ್ಮಿಸಿದರು. ಈ ದೇವಾಲಯಕ್ಕೆ ಒಟ್ಟು ಎರಡು ದ್ವಾರಗಳು ಇದ್ದು, ಒಂದು ದಕ್ಷಿಣಕ್ಕೆ ದ್ವಾರ ಮತ್ತೊಂದು ಪೂರ್ವ ದ್ವಾರ.
ಈ ದೇವಾಲಯವು ಬೆಂಗಳೂರಿಂದ 93 ಕಿ.ಮೀ ಮತ್ತು ಕೋಲಾರದಿಂದ 30 ಕಿ.ಮೀ ದೂರದಲ್ಲಿದೆ. ಹಾಗೂ ಮುಳುಬಾಗಿಲುನಿಂದ 14 ಕಿ.ಮೀ ಮತ್ತು ಕೋಲಾರದ ಕನಕನಪಾಳ್ಯ ರೈಲ್ವೆ ನಿಲ್ದಾಣದಿಂದ 30 ಕಿ.ಮೀ ದೂರದಲ್ಲಿದೆ.
ಈ ಬೃಹತ್ ದೇವಾಲಯದ ಸಂಕೀರ್ಣವು ಅನೇಕ ದೇವಾಲಯಗಳನ್ನು ಹೊಂದಿದೆ ಮತ್ತು ಅವುಗಳು:
- ರಾಮಲಿಂಗೇಶ್ವರ ದೇವಸ್ಥಾನ
- ಲಕ್ಷ್ಮಣಲಿಂಗೇಶ್ವರ ದೇವಸ್ಥಾನ
- ಭರತಲಿಂಗೇಶ್ವರ ದೇವಸ್ಥಾನ
- ಶತ್ರುಘ್ನಲಿಂಗೇಶ್ವರ ದೇವಸ್ಥಾನ
- ವಾಲಿ ಸುಗ್ರೀವ ದೇವಾಲಯ
- ಸುಬ್ರಹ್ಮಣ್ಯ ದೇವಸ್ಥಾನ
- ಕಾಮಾಕ್ಷಿ ದೇವಸ್ಥಾನ
- ಲಿಂಗೇಶ್ವರ ದೇವಸ್ಥಾನ
ಲಕ್ಷ್ಮಣಲಿಂಗೇಶ್ವರ ದೇವಸ್ಥಾನದ ಹೊರಭಾಗವನ್ನು ತುಂಬಾ ಅದ್ಭುತವಾಗಿ ಕೆತ್ತನೆ ಮಾಡಲಾಗಿದೆ. ಒಳಗೆ ನಾಲ್ಕು ಕಂಬಗಳ ನವರಂಗ ಇದ್ದು, ವಿವಿಧ ನೃತ ಭಂಗಿ ಅಲಂಕಾರಗಳಿದ ಕೆತ್ತನೆ ಮಾಡಲಾಗಿದೆ. ಇತಿಹಾಸಕಾರರ ಪ್ರಕಾರ ಈ ದೇವಾಲಯಗಳ ಸಂಕೀರ್ಣದಲ್ಲಿ ಇರುವ ಅತಿ ದೊಡ್ಡ ದೇವಾಲಯವಾಗಿದೆ. ನವರಂಗದ ಮೇಲ್ಚಾವಣಿಯ ಮೇಲೆ ಅಷ್ಟ ದಿಕ್ಪಾಲಕರು (ಎಂಟು ದಿಕ್ಕುಗಳ ರಕ್ಷಕರು) ಕೆತ್ತನೆ ಇದೆ. ಗರ್ಭಗುಡಿಯಲ್ಲಿ ಲಕ್ಷ್ಮಣ ಪ್ರತಿಷ್ಠಾಪಿಸಿದ್ದ ಲಿಂಗವಿದ್ದು, ಈ ದೇವಾಲಯಗಳ ಸಂಕೀರ್ಣದಲ್ಲಿ ಇರುವ ಎಲ್ಲ ಲಿಂಗಗಳಿಗಿಂತ ಅತಿ ದೊಡ್ಡದಾದ ಲಿಂಗವಾಗಿದೆ.
ಶತ್ರುಘ್ನಲಿಂಗೇಶ್ವರ ದೇವಸ್ಥಾನವು ಎತ್ತರವಾದ ಜಗುಲಿಯ ಮೇಲೆ ಇದ್ದು, ನವರಂಗದ ಮೇಲ್ಚಾವಣಿಯ ಮೇಲೆ ಅಷ್ಟ ದಿಕ್ಪಾಲಕರು (ಎಂಟು ದಿಕ್ಕುಗಳ ರಕ್ಷಕರು) ಕೆತ್ತನೆ ಇದೆ. ಗರ್ಭಗುಡಿಯಲ್ಲಿ ಶತ್ರುಘ್ನ ಪ್ರತಿಷ್ಠಾಪಿಸಿದ್ದ ಲಿಂಗವಿದೆ.
ಭರತಲಿಂಗೇಶ್ವರ ದೇವಸ್ಥಾನದ ಒಳಗೆ ಪ್ರವೇಶಿಸಿದಾಗ ಮೊದಲಿಗೆ ಒಂದು ನವರಂಗವಿದ್ದು, ಈ ನವರಂಗದಲ್ಲಿ ಇರುವ ಮಂಟಪಗಳು ಮಾನಸ್ತಬವಾಗಿವೆ. ನಂತರ ಗರ್ಭಗುಡಿಯಲ್ಲಿ ಶತ್ರುಘ್ನ ಪ್ರತಿಷ್ಠಾಪಿಸಿದ್ದ ಲಿಂಗವಿದೆ ಎಂದು ಪುರಾಣ ಹೇಳುತ್ತವೆ.
ಭೇಟಿ ನೀಡಿ













