ಯರಗೋಳ ಅಣೆಕಟ್ಟು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬಲಮಂಡೆ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲಿ ಬರುವ ಆಣೆಕಟ್ಟು ಆಗಿದ್ದು, ಈ ಅಣೆಕಟ್ಟು ಕೋಲಾರ, ಬಂಗಾರಪೇಟೆ, ಮಾಲೂರು ಸುತ್ತಮುತ್ತಲ 45 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಆಣೆಕಟ್ಟು ಆಗಿದೆ.
ಈ ಅಣೆಕಟ್ಟು ಬೆಂಗಳೂರಿಂದ 95 ಕಿ.ಮೀ ಮತ್ತು ಕೋಲಾರದಿಂದ 45 ಕಿ.ಮೀ ದೂರದಲ್ಲಿದೆ. ಹಾಗೂ ಬಂಗಾರಪೇಟೆ ಯಿಂದ 28 ಕಿ.ಮೀ ದೂರದಲ್ಲಿದೆ.
ಅಣೆಕಟ್ಟು ಆಯಾಮಗಳು ಎತ್ತರ 40 ಮೀಟರ್ (132 ಅಡಿ) ಮತ್ತು ಉದ್ದ 414 ಮೀಟರ್ (1366 ಅಡಿ) ಹೊಂದಿದೆ. ಈ ಅಣೆಕಟ್ಟು ಸುಮಾರು 308.46 ಕೋಟಿ ರೂ.ಗಳ ಯೋಜನೆಯ ಭಾಗವಾಗಿ ಇದನ್ನು ನಿರ್ಮಿಸಲಾಗಿದೆ. ಮಾರ್ಕಂಡೇಯ ಜಲಾಶಯದಿಂದ ತಮಿಳುನಾಡಿಗೆ ಹರಿಯುವ ನೀರನ್ನು ನಿಲ್ಲಿಸಲು ಮತ್ತು ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳು ಹಾಗೂ ಮೂರು ತಾಲ್ಲೂಕುಗಳ 45 ಹಳ್ಳಿಗಳಿಗೆ ನೀರು ಒದಗಿಸಲು ಹೊಸ ಅಣೆಕಟ್ಟನ್ನು ನಿರ್ಮಿಸಲಾಗಿದೆ.
ಜಿಲ್ಲೆಯ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಿಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ನಿರ್ಮಿಸಲಾದ ಯರಗೋಳ್ ಅಣೆಕಟ್ಟನ್ನು 11 ನವೆಂಬರ್ 2023 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಭೇಟಿ ನೀಡಿ







