ಗೋಸಾಯಿ ಘಾಟ್ ಶ್ರೀರಂಗಪಟ್ಟಣ

ಗೋಸಾಯಿ ಘಾಟ್ ವೇರಿ ನದಿಯ ದಡದಲ್ಲಿ ಮತ್ತು ತ್ರಿವೇಣಿ ಸಂಗಮಕ್ಕೆ ಸಮೀಪದಲ್ಲಿದೆ. ಗೋಸಾಯಿ ಘಾಟ್ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪಟ್ಟಣದಲ್ಲಿದೆ. ಘೋಸಾಯಿ ಘಾಟ್ ಕೇವಲ ಹಿಂದೂಗಳ ಧಾರ್ಮಿಕ ಕಾರ್ಯಗಳ ಸ್ಥಳವಲ್ಲ. ಇದು ಜನಪ್ರಿಯ ಪಿಕ್ನಿಕ್ ತಾಣವಾಗಿದೆ ಮತ್ತು ನದಿಯ ತೀರದಲ್ಲಿರುವುದರಿಂದ ಸುತ್ತಮುತ್ತಲಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಸ್ಥಳದಲ್ಲಿ ಅನೇಕ ಚಲನಚಿತ್ರಗಳನ್ನೂ ಚಿತ್ರಿಸಲಾಗಿದೆ.

ಗೋಸಾಯಿ ಘಾಟ್ ಬೆಂಗಳೂರಿನಿಂದ ಸುಮಾರು 134ಕಿ.ಮೀ ದೂರದಲ್ಲಿದೆ. ಮಂಡ್ಯ ನಗರದಿಂದ ಸುಮಾರು 28ಕಿ.ಮೀ ದೂರದಲ್ಲಿದೆ ಹಾಗೂ ಮೈಸೂರುನಗರ ದಿಂದ 16ಕಿ.ಮೀ ದೂರದಲ್ಲಿದೆ. ಶ್ರೀರಂಗಪಟ್ಟಣದಿಂದ 4ಕಿ.ಮೀ ದೂರದಲ್ಲಿದೆ. ಶ್ರೀರಂಗಪಟ್ಟಣ ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು ಕೇವಲ 6 ಕಿ.ಮೀ ದೂರದಲ್ಲಿದೆ.

ಎರಡು ಘಾಟ್‌ಗಳ ನಡುವೆ, ಕಾಶಿ ವಿಶ್ವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಚಿಕ್ಕ ಘಾಟ್‌ನಲ್ಲಿ ಸಣ್ಣ ದೇವಾಲಯ ಮತ್ತು ಸ್ನಾನಘಟ್ಟವಿದೆ. ದೊಡ್ಡ ಗೋಸಾಯಿ ಘಾಟ್ ಸ್ನಾನಘಟ್ಟದ ದಂಡೆಯಲ್ಲಿ ದೇವಾಲಯ ಸಂಕೀರ್ಣವನ್ನು ಹೊಂದಿದೆ. ಸಂಕೀರ್ಣವು ಈಶ್ವರ, ಹನುಮಂತ, ಮತ್ತು ಕಾಶಿ ವಿಶ್ವನಾಥ ಮುಂತಾದ ದೇವಾಲಯಗಳನ್ನು ಹೊಂದಿದೆ. ವಿಶಾಲವಾದ ಕಾಶಿ ವಿಶ್ವನಾಥ ದೇವಾಲಯವು ಮುಖ್ಯ ಕ್ಷೇತ್ರವಾಗಿದ್ದು, ದೇವಾಲಯದ ಮುಂಭಾಗದಲ್ಲಿ ಕಾವೇರಿಯ ಹರಿವು ಪ್ರವಾಸಿಗರಿಗೆ ಅಪಾರ ಸಂತೋಷವನ್ನು ನೀಡುತ್ತದೆ. ಈ ಸ್ಥಳವು ಇತಿಹಾಸದ ಕೆಲವು ಕಥೆಗಳನ್ನು ಹೊಂದಿದೆ. ಅಂತಿಮ ಕ್ರಿಯಾ ವಿಧಿವಿಧಾನಗಳನ್ನು ಮಾಡಲಾಗುವುದು.

ಭೇಟಿ ನೀಡಿ
ಶ್ರೀರಂಗಪಟ್ಟಣ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು