ಗೋಸಾಯಿ ಘಾಟ್ ಶ್ರೀರಂಗಪಟ್ಟಣ

ಗೋಸಾಯಿ ಘಾಟ್ ಕಾವೇರಿ ನದಿಯ ದಡದಲ್ಲಿ, ತ್ರಿವೇಣಿ ಸಂಗಮದ ಸಮೀಪದಲ್ಲಿದೆ. ಇದು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪಟ್ಟಣದಲ್ಲಿ ನೆಲೆಗೊಂಡಿದೆ. ಗೋಸಾಯಿ ಘಾಟ್ ಕೇವಲ ಹಿಂದೂಗಳ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರುವ ಸ್ಥಳವಲ್ಲ; ಇದು ಜನಪ್ರಿಯ ಪಿಕ್ನಿಕ್ ತಾಣವಾಗಿಯೂ ಪ್ರಸಿದ್ಧವಾಗಿದೆ. ನದಿಯ ತೀರದಲ್ಲಿರುವುದರಿಂದ ಸುತ್ತಮುತ್ತಲಿನ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಈ ಸುಂದರ ಸ್ಥಳದಲ್ಲಿ ಅನೇಕ ಚಲನಚಿತ್ರಗಳ ಚಿತ್ರೀಕರಣವೂ ನಡೆದಿದೆ.

ಶ್ರೀರಂಗಪಟ್ಟಣ ಗೋಸಾಯಿ ಘಾಟ್ ನ ದೂರಗಳು

  • ಬೆಂಗಳೂರು – 124 ಕಿ.ಮೀ
  • ಮಂಡ್ಯ – 27 ಕಿ.ಮೀ
  • ಶ್ರೀರಂಗಪಟ್ಟಣ – 750 ಮೀ
  • ಮೈಸೂರು – 15 ಕಿ.ಮೀ
  • ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣ – 2 ಕಿ.ಮೀ
  • ಮೈಸೂರು ವಿಮಾನ ನಿಲ್ದಾಣ – 34 ಕಿ.ಮೀ

ಎರಡು ಘಾಟ್‌ಗಳ ನಡುವೆ, ಕಾಶಿ ವಿಶ್ವೇಶ್ವರ ದೇವಾಲಯದ ಪಕ್ಕದಲ್ಲಿರುವ ಸಣ್ಣ ಘಾಟ್‌ನಲ್ಲಿ ಒಂದು ಚಿಕ್ಕ ದೇವಾಲಯ ಹಾಗೂ ಸ್ನಾನಘಟ್ಟವಿದೆ. ದೊಡ್ಡ ಗೋಸಾಯಿ ಘಾಟ್‌ನಲ್ಲಿ ಸ್ನಾನಘಟ್ಟದ ದಂಡೆಯ ಬಳಿ ದೇವಾಲಯ ಸಂಕೀರ್ಣವಿದೆ.

ಈ ಸಂಕೀರ್ಣದಲ್ಲಿ ಈಶ್ವರ, ಹನುಮಂತ ಮತ್ತು ಕಾಶಿ ವಿಶ್ವನಾಥ ದೇವಾಲಯಗಳು ಸೇರಿದಂತೆ ಅನೇಕ ಸನ್ನಿಧಿಗಳು ಇವೆ. ಅವುಗಳಲ್ಲಿ ವಿಶಾಲವಾದ ಕಾಶಿ ವಿಶ್ವನಾಥ ದೇವಾಲಯವು ಮುಖ್ಯ ಕ್ಷೇತ್ರವಾಗಿದ್ದು, ದೇವಾಲಯದ ಮುಂಭಾಗದಲ್ಲಿ ಹರಿಯುವ ಕಾವೇರಿ ನದಿ ಪ್ರವಾಸಿಗರಿಗೆ ಅಪಾರ ಆನಂದವನ್ನು ನೀಡುತ್ತದೆ.

ಈ ಸ್ಥಳವು ಇತಿಹಾಸ ಸಂಬಂಧಿತ ಹಲವಾರು ಕಥೆಗಳನ್ನೂ ಹೊಂದಿದೆ. ಇಲ್ಲಿಗೆ ಅಂತಿಮ ಕ್ರಿಯಾ ವಿಧಿವಿಧಾನಗಳನ್ನು ಸಹ ನೆರವೇರಿಸಲಾಗುತ್ತದೆ.

ಭೇಟಿ ನೀಡಿ
ಶ್ರೀರಂಗಪಟ್ಟಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section