ಹಟ್ಟಿ ಚಿನ್ನದ ಗಣಿ

ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ (HGML) ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಪ್ರದೇಶ ಚಿನ್ನದ ಉತ್ಪಾದಕ ಮಂಡಳಿಯಾಗಿದೆ. ಇದು ಜಗತ್ತಿನ ಅತ್ಯಂತ ಪುರಾತನ ಲೋಹದ ಗಣಿಗಳಲ್ಲಿ ಒಂದಾಗಿದೆ. ಈ ಹಟ್ಟಿ ಚಿನ್ನದ ಗಣಿ ಕಂಪನಿಯು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿರುವ ಹಟ್ಟಿ ಗ್ರಾಮದಲ್ಲಿ ಇದೆ. ಮೊದಲು ಹೈದರಾಬಾದ್ ಚಿನ್ನದ ಗಣಿಯೆಂದು 1947 ರಲ್ಲಿ ಸ್ಥಾಪನೆಯಾಗಿದ್ದು, ಹೈದರಾಬಾದ್ ನಿಜಾಮರ ಆಳ್ವಿಕೆಯ ವಿಮೋಚನೆಯ ನಂತರ
ಕರ್ನಾಟಕ ಸರ್ಕಾರದ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಎಂದು ಆಯಿತು. ದೇಶದ ಏಕೈಕ ಪ್ರಥಮ ಚಿನ್ನದ ಉತ್ಪಾದಕ ಘಟಕ ಎಂಬ ವಿಶಿಷ್ಟ ಹಿರಿಮೆಯನ್ನು ಹೊಂದಿದೆ.

ಈ ಸ್ಥಳವು ಬೆಂಗಳೂರಿನಿಂದ 480 ಕಿ.ಮೀ,ರಾಯಚೂರು ನಗರದಿಂದ ರಸ್ತೆ ಮಾರ್ಗವಾಗಿ 80 ಕಿ.ಮೀ ಮತ್ತು ರೈಲ್ವೆ ಮಾರ್ಗವಾಗಿ ಕೇವಲ 82 ಕಿ.ಮೀ ದೂರದಲ್ಲಿದೆ. ಹಾಗೂ ಲಿಂಗಸುಗೂರು ತಾಲೂಕಿನಿಂದ 23 ಕಿ.ಮೀ ದೂರದಲ್ಲಿದೆ.

HGML ಕರ್ನಾಟಕದಲ್ಲಿ ಚಿನ್ನದ ನಿಕ್ಷೇಪಗಳ ಪರಿಶೋಧನೆ, ಅಭಿವೃದ್ಧಿ ಮತ್ತು ಶುದ್ದೀಕರಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ . ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನ ಕಾರ್ಪೊರೇಟ್ ಕಚೇರಿಯು ಬೆಂಗಳೂರಿನಲ್ಲಿದ್ದು, ಇದು ಎರಡು ಘಟಕಗಳನ್ನು ನಿರ್ವಹಿಸುತ್ತದೆ.

  • ರಾಯಚೂರು ಜಿಲ್ಲೆಯಲ್ಲಿ ಹಟ್ಟಿ ಚಿನ್ನದ ಘಟಕ (HGU) ಮತ್ತು
  • ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಚಿನ್ನದ ಘಟಕ (CGU)

ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಚಿನ್ನದ ಘಟಕ (CGU) ಅಜ್ಜನಹಳ್ಳಿಯಲ್ಲಿ ಕಾರ್ಯನಿರ್ವಹಿಸುವ ಗಣಿಗಳಿಂದ ವರ್ಷಕ್ಕೆ 5,50,000 ಟನ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಘಟಕ.

HGML ಪ್ರಸ್ತುತ ಹಟ್ಟಿ ಚಿನ್ನದ ಗಣಿ, UTI ಮತ್ತು ಹೀರಾ-ಬುದ್ದಿನ್ನಿ ನಲ್ಲಿರುವ ಎರಡು ಉಪಘಟಕ ಗಣಿಗಳಿಂದ ಅದಿರನ್ನು ಸಂಸ್ಕರಿಸುತ್ತದೆ. ಹಂತ ಹಂತವಾಗಿ ಮೆಟಲರ್ಜಿಕಲ್ ಯೋಜನೆಯ ವಿಸ್ತೃತ ಸಾಮರ್ಥ್ಯ ಸೇರಿದಂತೆ ಪ್ರಮುಖ ವಿಸ್ತರಣೆಯು ಸಹ ಪರಿಗಣನೆಯಲ್ಲಿದೆ. ಆದಾಗ್ಯೂ, CGU ನ ಚಿನ್ನದ ಗಣಿಗಾರಿಕೆ ಮತ್ತು ಸಂಸ್ಕರಣೆಯ ಅದಿರು ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಭೇಟಿ ನೀಡಿ
ಲಿಂಗಸುಗೂರು ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ರಾಯಚೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು