ಮಲ್ಲಿಯಾಬಾದ್ ಕೋಟೆಯು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಮಲ್ಲಿಯಾಬಾದ್ ಗ್ರಾಮದಲ್ಲಿ ಇರುವ ಒಂದು ಐತಿಹಾಸಿಕ ಕೋಟೆಯಾಗಿದೆ. ಇಲ್ಲಿ ಐತಿಹಾಸಿಕ ಕೋಟೆ ಮತ್ತು ಸ್ಮಾರಕಗಳನ್ನು ಹೊಂದಿದೆ. ಮಲ್ಲಿಯಾಬಾದ್ ಗ್ರಾಮವನ್ನು ಸುತ್ತುವರೆದಿರುವ ಬಲವಾದ ಕೋಟೆಯು ರಾಯಚೂರಿನ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಇಲ್ಲಿ ಗೋಶಾಲೆ ಇದ್ದು, ಈ ಗೋಶಾಲೆಯು 400 ವರ್ಷಗಳ ಇತಿಹಾಸ ಹೊಂದಿದೆ. ಈ ಕೋಟೆಯ ಪಕ್ಕದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಕೂಡ ಇದೆ.
ಈ ಕೋಟೆಯು ಬೆಂಗಳೂರಿನಿಂದ ಸುಮಾರು 405 ಕಿ.ಮೀ ಮತ್ತು ರಾಯಚೂರು ನಗರದಿಂದ 05 ಕಿ.ಮೀ ದೂರದಲ್ಲಿದೆ.
ಮಲ್ಲಿಯಾಬಾದ್ ಕೋಟೆಯು ರಾಯಚೂರು ಮತ್ತು ಉತ್ತರ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖವಾಗಿದೆ. ಪಾಳುಬಿದ್ದ ವಿಷ್ಣು ದೇವಾಲಯ ಮತ್ತು ಬಿಳಿ ಗ್ರಾನೈಟ್‌ನಲ್ಲಿ ಕೆತ್ತಿದ ಜೀವ ಗಾತ್ರದ ಜೋಡಿ ಆನೆಗಳು ಕೋಟೆಯಲ್ಲಿವೆ, ರಾಜ್ಯ ಪುರಾತತ್ವ ಇಲಾಖೆಯು ಸಂರಕ್ಷಿತ ಐತಿಹಾಸಿಕ ಸ್ಮಾರಕವೆಂದು ಘೋಷಿಸಿದೆ. ಆನೆಗಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿದ್ದವು. ಮೊದಲಿಗೆ ಆನೆಗಳನ್ನು ವಿಷ್ಣು ದೇವಾಲಯದ ಮುಂಭಾಗದಲ್ಲಿ ಇರಿಸಲಾಗಿತ್ತು ಮತ್ತು ಒಮ್ಮೆ ಮಲ್ಲಿಯಾಬಾದ್ ಕೋಟೆಯ ಹೆಬ್ಬಾಗಿಲಿನಲ್ಲಿ ಇರಿಸಲಾಗಿತ್ತು.
13 ನೇ ಶತಮಾನದಲ್ಲಿ ವಾರಂಗಲ್‌ನ ಕಾಕತೀಯ ರಾಣಿ ನಿರ್ಮಿಸಿದ ಕೋಟೆ ಹೇಳಲಾಗುವ ಮಲ್ಲಿಯಾಬಾದ್ ಕೋಟೆ, ಕೋಟೆಯೊಳಗೆ ಇರುವ ವಿಷ್ಣು ದೇವಾಲಯ ಮತ್ತು ಬಿಳಿ ಗ್ರಾನೈಟ್‌ನಲ್ಲಿ ಸುಂದರವಾಗಿ ಕೆತ್ತಿದ ಜೀವ ಗಾತ್ರದ ಆನೆಗಳ ಜೋಡಿಯ ಅವಶೇಷಗಳು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಮೇಲೆ ಬೆಳಕು ಚೆಲ್ಲುವ ಪ್ರಮುಖ ಐತಿಹಾಸಿಕ ಸ್ಮಾರಕಗಳಾಗಿವೆ.
ಭೇಟಿ ನೀಡಿ