ಮಸ್ಕಿ ಅಶೋಕ ಶಾಸನ

ಮಸ್ಕಿಯು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಒಂದು ಐತಿಹಾಸಿಕ ಪಟ್ಟಣ ಮತ್ತು ಹೊಸದಾಗಿ ರಚಿಸಿದ ತಾಲೂಕು ಕೇಂದ್ರವಾಗಿದೆ. ಮಸ್ಕಿ ಪಟ್ಟಣದಲ್ಲಿ ದೊರೆತ ಅಶೋಕನ ಶಿಲಾಶಾಸನವು ಈ ನಗರಕ್ಕೆ ಐತಿಹಾಸಿಕ ಮಹತ್ವ ತಂದಿದೆ. ಈ ಊರು ಇತಿಹಾಸ ಪೂರ್ವಕಾಲದ ನಿವೇಶನವು ಆಗಿದ್ದು ಶಾಸನಗಳಲ್ಲಿ ಮೊಸಂಗಿ ಎಂದು ಪರಿಚಿತವಾಗಿದೆ.

ಮಸ್ಕಿಯು ಬೆಂಗಳೂರುನಿಂದ 427 ಕಿ.ಮೀ ಮತ್ತು ರಾಯಚೂರು ನಿಂದ 88 ಕಿ.ಮೀ ದೂರದಲ್ಲಿದೆ. ಹಾಗೂ ಮಸ್ಕಿ ನಗರದಿಂದ ಕೇವಲ 2.2 ಕಿ.ಮೀ ದೂರದಲ್ಲಿದೆ.

ಇಲ್ಲಿ ದೊರೆತಿರುವ ಅಶೋಕನ ಶಾಸನಗಳು, ಮೌಯ೯ ವಂಶದ ಚಕ್ರವತಿ೯ ಅಶೋಕನ ಶಿಲಾ ಶಾಸನ ಹೊಂದಿದ ಮಸ್ಕಿ ಐತಿಹಾಸಿಕ ಹಾಗೂ ಧಾಮಿ೯ಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಮಾಸಂಗಿಪುರ ಇಂದಿನ ಮಸ್ಕಿ ಇದೀಗ ಸಾಹಿತ್ಯ ಸಾಮಾಜಿಕವಾಗಿಯೂ ಅಷ್ಟೆ ಬೆಳದಿದೆ. ದೇವನಾಂಪ್ರೀಯ ಅಶೋಕ ಎಂಬ ಶಾಸನವನ್ನು ಕ್ರಿ.ಶ.1915ರಲ್ಲಿ ಎಂಜಿನಿಯರ್ ಆಗಿದ್ದ ಸಿ.ಬಿಡನ್ ಎಂಬುವರು ಈ ಶಾಸನವನ್ನು ಗುರುತಿಸಿದ್ದಾರೆ. ಇದು ಬ್ರಾಹ್ಮಿ ಲಿಪಿಯಲ್ಲಿ ಕೆತ್ತಲಾಗಿದೆ. ಇಲ್ಲಿ ಶಿಲಾಯುಗದ ಅಸ್ಥಿಪಂಜರಗಳು, ವೀರ ಗಲ್ಲುಗಳು ಮತ್ತು ಸಿಡಿಲು ಗುಂಡು ದೊರೆತಿರುವ ಶಾಸನಗಳು.

ಭೇಟಿ ನೀಡಿ
ರಾಯಚೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section