ರಾಜಲಬಂಡಾ ಆಣೆಕಟ್ಟು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕುರ್ಡಿ ಬಳಿಯ ರಾಜಲಬಂಡ ಹಳ್ಳಿಯಲ್ಲಿ ನಿರ್ಮಿಸಲಾದ ಆಣೆಕಟ್ಟು ಆಗಿದೆ. ರಾಜಲಬಂಡ ತುಂಗಭದ್ರಾ ನದಿಯ ದಡದಲ್ಲಿದೆ ಮತ್ತು ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಭಾಗದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಅಣೆಕಟ್ಟು ಚೆಕ್ ಡ್ಯಾಮ್ ಆಗಿದೆ ಮತ್ತು ಪ್ರವಾಸಿಗರ ನೆಚ್ಚಿನ ತಾಣ. ಈ ಅಣೆಕಟ್ಟೆಗೆ 31 ಅಡಿ ಎತ್ತರ, 2,690 ಮೀ ಉದ್ದದ ತಡೆಗೋಡೆ ನಿರ್ಮಿಸಲಾಗಿದೆ.
ಈ ಆಣೆಕಟ್ಟು ಬೆಂಗಳೂರು ನಿಂದ ಸುಮಾರು 404 ಕಿ.ಮೀ ಮತ್ತು ರಾಯಚೂರುನಿಂದ 47 ಕಿ.ಮೀ ದೂರದಲ್ಲಿದೆ. ಹಾಗೂ ಮಾನ್ವಿ ತಾಲೂಕಿನಿಂದ 25 ಕಿ.ಮೀ ದೂರದಲ್ಲಿದೆ.
ಈ ಆಣೆಕಟ್ಟುನ್ನು 1946 ರಲ್ಲಿ ಪ್ರಾರಂಭಿಸಿದರು ಮತ್ತು 1958 ರಲ್ಲಿ ಸಂಪೂರ್ಣ ನಿರ್ಮಾಣ ಮಾಡಲಾಯಿತು. ಆಗಿನ ಕಾಲದಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಭಾಗದಲ್ಲಿ ಇರುವ ಗ್ರಾಮಗಳಿಗೆ ಉಪಯೋಗಿಸಲು ಈ ಡ್ಯಾಮ್ ಅನ್ನು ನಿರ್ಮಿಸಲಾಯಿತು. ಈ ಡ್ಯಾಮ್ ಸುಮಾರು 87500 ಎಕರೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ.
ರಜಾ ದಿನಗಳು ಹಾಗೂ ಪ್ರತಿ ಭಾನುವಾರ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಭೇಟಿ ನೀಡಿ