ಬೋರನಕಣಿವೆ

ಬೋರನಕಣಿವೆಯು ಕರ್ನಾಟಕ ರಾಜ್ಯದ ತುಮುಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹೊಯ್ಸಳಕಟ್ಟೆ ಎಂಬ ಗ್ರಾಮದಲ್ಲಿ ಇದೆ. ಈ ಅಣೆಕಟ್ಟನ್ನು ಮೈಸೂರು ಸಂಸ್ಥಾನದ ಮಹಾರಾಜರಾದ ಚಾಮರಾಜೇಂದ್ರ ಒಡೆಯರ್ ಕಟ್ಟಿಸಿದರು. ಆಗ ದಿವಾನರಾಗಿದ್ದವರು ಕೆ ಶೇಷಾದ್ರಿ ಅಯ್ಯರ್. ಅಣೆಕಟ್ಟಿನ ನಿರ್ಮಾಣ ಕಾರ್ಯವನ್ನು ಮೇ ತಿಂಗಳು 1888ನೇ ಇಸವಿಯಲ್ಲಿ ಪ್ರಾರಂಭಿಸಿ ಅಕ್ಟೋಬರ್ ತಿಂಗಳು 1892ನೇ ಇಸವಿಯಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಿದರು.

ಈ ಆಣೆಕಟ್ಟು ಬೆಂಗಳೂರಿಂದ ಸುಮಾರು 161 ಕಿ.ಮೀ ಮತ್ತು ತುಮಕೂರಿನಿಂದ 86 ಕಿ.ಮೀ ದೂರದಲ್ಲಿದೆ. ಹಾಗೂ ಚಿಕ್ಕನಾಯಕನಹಳ್ಳಿ ಯಿಂದ ಕೇವಲ 30 ಕಿ.ಮೀ ದೂರದಲ್ಲಿದೆ.

ಎರಡು ಗುಡ್ಡಗಳ ನಡುವೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟೆಯೇ ಬೋರನ ಕಣಿವೆ ಜಲಾಶಯ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕನ್ನಂಬಾಡಿ ಕಟ್ಟೆ (ಕೆ‌.ಆರ್.ಎಸ್) ಗಿಂತಲೂ ಮೊದಲೇ ನಿರ್ಮಾಣವಾದದ್ದು ಈ ಬೋರನ ಕಣಿವೆ ಜಲಾಶಯ.

ಈ ಅಣೆಕಟ್ಟು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಮುಖ್ಯ ಎಂಜಿನಿಯರ್ ಕರ್ನಲ್ ಮೈಕನಿಲ್, ಕ್ಯಾಂಪೈಲರ್ ಸಿ ಬವನ್, ಸಹಾಯಕ ಮುಖ್ಯ ಎಂಜಿನಿಯರ್ ಡಬ್ಲು ಮೆಕಚಿನ್ ಯಸ್ಕೊಯಿರ್ ಮತ್ತು ಕಾರ್ಯ ನಿರ್ವಾಹಕ ಎಂಜಿನಿಯರ್ ರಾಘವಲು ನಾಯ್ಡು ಎಂಬವರು.

ಈ ಜಲಾಶಯ ನಿರ್ಮಿಸಲು ಬರ ಪರಿಹಾರ ಕಾಮಗಾರಿಯಾಗಿ ಅಂದಿನ ಮಹಾರಾಜರು ನೀಡಿದ ಆದೇಶದಂತೆ ನಿರ್ಮಾಣ ಮಾಡಲಾಗಿತ್ತು. ಆಗ ಇದಕ್ಕೆ ತಗುಲಿದ ವೆಚ್ಚ 2,20,000 (ಎರಡು ಲಕ್ಷದ ಇಪ್ಪತ್ತು ಸಾವಿರ) ರೂಪಾಯಿಗಳು. ಈ ಜಲಾಶಯದ ಮುಂಭಾಗದಲ್ಲಿ ಪುರಾತನವಾದ ಭೈರವೇಶ್ವರನ ದೇವಸ್ಥಾನ ಇದೆ. ಹಾಗಾಗಿ ಈ ಪ್ರದೇಶಕ್ಕೆ ಭೈರವ ಕಣಿವೆ ಎಂಬ ಹೆಸರಿತ್ತು, ಬೋರನ ಮನವಿ ಮೇರೆಗೆ ನಿರ್ಮಾಣವಾದ ಡ್ಯಾಂ ಆದರಿಂದ ಕ್ರಮೇಣ ಬೋರನಕಣಿವೆ ಎಂದಾಯಿತು.

ಭೇಟಿ ನೀಡಿ
ಚಿಕ್ಕನಾಯಕನಹಳ್ಳಿ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು