ಗೂಳೂರು ಮಹಾ ಗಣಪತಿ ಟೆಂಪಲ್

ಗೂಳೂರು ಮಹಾ ಗಣಪತಿ ಟೆಂಪಲ್ ಕರ್ನಾಟಕದ ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ಶಂಕಪುರ ಎಂಬ ಸಣ್ಣ ಹಳ್ಳಿಯಲ್ಲಿದೆ. ಈ ದೇವಾಲಯವು ಶ್ರೀ ಮಹಾ ಗಣಪತಿಗೆ ಸಮರ್ಪಿತವಾಗಿರುತ್ತದೆ. ಇದು ಸ್ಥಳೀಯರ ಭಕ್ತಿ ಕೇಂದ್ರವಾಗಿದ್ದು, ಪ್ರಸಿದ್ಧಿ ಹೊಂದಿರುವ ಪವಿತ್ರ ಸ್ಥಳವಾಗಿದೆ.

ಈ ದೇವಾಲಯವು ಬೆಂಗಳೂರಿನಿಂದ 72 ಕಿ.ಮೀ ಮತ್ತು ತುಮುಕೂರು ನಗರದಿಂದ ಕೇವಲ 8 ಕಿ.ಮೀ ದೂರದಲ್ಲಿದೆ.

ಇತಿಹಾಸ

ಇದು ಇತಿಹಾಸ ಸೃಷ್ಟಿಸಿದ ಗುರು ಮಹಾಗಣಪತಿ ದೇವಾಲಯವಾಗಿದೆ. ಈ ದೇವಾಲಯದ ಗಣಪತಿಯು ಋಗ್ರು ಮಹರ್ಷಿಯು ಪ್ರತಿಷ್ಠಾಪಿಸಿದ ಗಣಪತಿಯಾಗಿದೆ. ಈ ಮಹರ್ಷಿಗಳು ಕಾಶಿ ಯಾತ್ರೆಗೆಂದು ಹೋಗುವಾಗ, ಇಲ್ಲಿ ಚೌತಿ ಹಬ್ಬದ ಸಮಯ. ಇಲ್ಲಿ ಅವರುಕೊಳದಲ್ಲಿ ಸ್ನಾನ ಮಾಡಿ, ಬೆನಕನ ಮೂರ್ತಿಯನ್ನು ರಚಿಸಿ ಪೂಜೆ ಮಾಡಿದರು. ನಂತರ ಮರುದಿನ ಅವರು ಕಾಶಿ ಯಾತ್ರೆಗೆಂದು ಹೊರಟಾಗ ಗಣಪತಿಯ ಪ್ರೇರಣೆಯಾಗುತ್ತದೆ. ಆಗ ಗಣಪತಿಯು ನನ್ನನ್ನು ಇಲ್ಲಿ ನನ್ನನ್ನು ನೆಡೆಸಿ ಕೊಡು ಎಂದು ಕೇಳಿದಾಗ, ನಂತರ ಅವರು ಮೂರು ತಿಂಗಳ ಕಾಲ ತಪಸ್ಸನ್ನು ಇಲ್ಲಿ ಮಾಡಿದರು. ಅವರು ತಿಂಗಳ ಕಾಲ ಇಲ್ಲಿ ತಪಸ್ಸು, ಪೂಜೆ ಮತ್ತು ಸಂಚಾರವನ್ನು ಮಾಡುತ್ತಿದ್ದರು. ಇದನ್ನು ನೋಡಿದ ಊರಿನ ಜನಗಳು ಅವರನ್ನು ಕೇಳಿದಾಗ ಅವರು ತಪ್ಪಸಿನ ಫಲವಾಗಿ ನಿಜವಾದ ಗಣಪತಿಯನ್ನು ಉದ್ಭವ ಮಾಡಿದರಂತೆ. ನಂತರ ಅವರು ಮಣ್ಣನ್ನು ತರಿಸಿ ಗಣಪತಿ ವಿಗ್ರಹ ಮಾಡಿದರು. ನಂತರ ಅವರು ಕಾಶಿ ಯಾತ್ರೆಗೆ ಹೊರಟರು. ಈ ಗಣಪತಿಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಗಣಪತಿಯಾಗಿದೆ.

ಭೇಟಿ ನೀಡಿ
ತುಮಕೂರು ತಾಲೂಕು ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು