ಶತಮಾನದಷ್ಟು ಹೆಚ್ಚು ಹಳೆಯದಾದ ಕೈದಾಳ ಚನ್ನಕೇಶವ ದೇವಾಲಯವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುಮಕೂರು ತಾಲ್ಲೂಕಿನ ಕೈದಾಳ ಗ್ರಾಮದಲ್ಲಿ ಇರುವ ದೇವಾಲಯವಿದೆ. ಈ ದೇವಾಲಯವು ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ದೇವಾಲಯವಾಗಿದೆ. ಸುಮಾರು ಕ್ರಿ.ಶ. 1152ರಲ್ಲಿ ಹೊಯ್ಸಳರ ಸಾಮಂತ ಬಾಚಿದೇವನ ಕಾಲದಲ್ಲಿ ಇಲ್ಲಿನ ಚನ್ನಕೇಶವ ದೇವಸ್ಥಾನ ದೇವಾಲಯವು ದ್ರಾವಿಡ ಹಾಗೂ ಹೊಯ್ಸಳ ಶೈಲಿಯಲ್ಲಿ ನಿರ್ಮಾಣವಾಗಿರುವ, ಉತ್ಕೃಷ್ಟಮಟ್ಟದ ಕಲಾ ವೈಭವವನ್ನು ಹೊಂದಿರುವ ವಿಶೇಷ ದೇವಾಲಯವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ 75 ಕಿ.ಮೀ ಮತ್ತು ತುಮಕೂರು ನಗರದಿಂದ 10 ಕಿ.ಮೀ ದೂರದಲ್ಲಿದೆ. ಹಾಗು ಈ ದೇವಾಲಯವು ತುಮಕೂರು ನಗರ ರೈಲು ನಿಲ್ದಾಣದಿಂದ ಕೇವಲ 08 ಕಿ.ಮೀ ದೂರದಲ್ಲಿದೆ.
ಚನ್ನಕೇಶವ ದೇವಾಲಯವು ದ್ರಾವಿಡ ಇಂದಿನ ಶೈಲಿಯಲ್ಲಿದೆ. ಮೂಲತಃ ಹೊಯ್ಸಳರ ಕಾಲದ ದೇವಾಲಯವಾಗಿದ್ದು, ನಂತರದ ದಿನಗಳಲ್ಲಿ ಇದನ್ನು ಹೆಚ್ಚು ಆಧುನೀಕರಿಸಲಾಗಿದೆ ಎಂದು ತೋರುತ್ತದೆ. ದೇವಾಲಯದ ಮಹಾದ್ವಾರದ ಮೇಲಿರುವ ಗೋಪುರವನ್ನು ವಿಜಯನಗರ ಕಾಲದಲ್ಲಿ ನಿರ್ಮಿಸಲಾಯಿತು ಮತ್ತು ಚನ್ನಿಗರಾಯನ ಮೂಲ ವಿಗ್ರಹವು ತುಂಬಾ ಸುಂದರವಾಗಿದೆ. ಈ ವಿಗ್ರಹವು 5.1 ಅಡಿ ಎತ್ತರವಿದ್ದು 21 ಅಡಿ ಎತ್ತರದ ಪೀಠದ ಮೇಲೆ ಸ್ಥಾಪಿಸಲಾಗಿದೆ. ವಿಗ್ರಹದ ಪ್ರಭಾವಲಯದಲ್ಲಿ ದಶಾವತಾರ ಚಿಹ್ನೆಗಳಿವೆ. ಮಹಾದ್ವಾರದ ಬಲಭಾಗದಲ್ಲಿರುವ ಕಂಬದ ಮೇಲೆ ಚನ್ನಕೇಶವ ತನ್ನ ಪತ್ನಿಯೊಂದಿಗೆ ಇರುವ ವಿಗ್ರಹವಿದೆ. ಎಡ ಕಂಬದ ಮೇಲೆ ಕತ್ತಿಯನ್ನು ಹಿಡಿದಿರುವ ಅಂಜಲಿ ಬುದ್ಧನ ಉತ್ತರಾಧಿಕಾರಿಯ ಚಿತ್ರವನ್ನು ಕೆತ್ತಲಾಗಿದೆ.
ಈ ದೇವಾಲಯದಲ್ಲಿ 1000 ವರ್ಷಗಳ ಹಿಂದೆ ರಚಿಸಿದಂತ ಚೆನ್ನಕೇಶವ ಮೂರ್ತಿ ಇಲ್ಲ. ಈಗ ಅಲ್ಲಿ 300 ವರ್ಷಗಳ ಹಿಂದೆ ರಚಿಸಿದಂತ ಮೂರ್ತಿಯನ್ನು ನಾವು ಇಲ್ಲಿ ಕಾಣಬಹುದು. ಕಾರಣ, 1749 ರಲ್ಲಿ ಹೈದ್ರಾಬಾದಿನ ನಿಜಾಮ ಆಗಿದ್ದ ನಾಸಿರ್ ಜಂಗ್ (ಹೈದರಾಬಾದ್ ರಾಜ್ಯವನ್ನು 1 ಜೂನ್ 1748 ರಿಂದ 1750 ರವರೆಗೆ ಆಳಿದರು). ಆ ಕಾಲದಲ್ಲಿ ತುಮಕೂರು, ಶ್ರೀರಂಗಪಟ್ಟಣ, ಮದುರೈ ಹೀಗೆ ಇತರೆ ಪ್ರದೇಶಗಳು ಸಂಪತ್ ಭರಿತವಾದ ಪ್ರದೇಶವಾಗಿತ್ತು. ಆ ಪ್ರದೇಶಗಳನ್ನು ಲೂಟಿ ಮಾಡಲು ನಾಸಿರ್ ಜಂಗ್ ಹೊರಟನು, ಮೊದಲು ಬಂದಂತಹ ಸ್ಥಳವೇ ಕೈದಾಳ. ಅಂತ ಕೈದಾಳವನ್ನು ಲೂಟಿ ಮಾಡಿ ನಂತರ ಶ್ರೀರಂಗಪಟ್ಟಣಕ್ಕೆ ಹೋಗುತ್ತಾನೆ. ಹೀಗೆ ಲೂಟಿ ಮಾಡಿ ಹೋಗುವ ಸಮಯದಲ್ಲಿ ಅವನು ಸ್ಥಳದಲ್ಲಿ ಇರುವಂತಹ ಚೆನ್ನಕೇಶವ ದೇವಾಲಯದ ಮೂರ್ತಿಯನ್ನು ಭಗ್ನಗೊಳಿಸುತ್ತಾನೆ. ಆಗ ಮೈಸೂರು ಸಂಸ್ಥಾನದ ಮಹಾರಾಜರು ಆಗದಂತಹ ಇಮ್ಮಡಿ ಕೃಷ್ಣರಾಜ ಒಡೆಯರ, ಆಸ್ಥಾನದಲ್ಲಿ ಚನ್ನಪಯ್ಯ ಎಂಬುವರು ಇದ್ದರು. ಅವರು ಒಂದು ಪತ್ರ ಬರೆದು ನಿಮ್ಮ ಊರಿನ ಚೆನ್ನಕೇಶವ ದೇವಾಲದಯದ ವಿಗ್ರಹ ಭಗ್ನಗೊಂಡಿದೆ ಹಾಗಾಗಿ ಬೇರೆಯೊಂದು ಮೂರ್ತಿ ತಂದು ಅಲ್ಲಿ ಪ್ರತಿಷ್ಠಾಪಿಸಿ, ಈ ಮೂರ್ತಿಯನ್ನು ವಿಸರ್ಜನೆ ಮಾಡಿ. ಗುಬ್ಬಿ ಹತ್ತಿರದ ಬೇಡರಾಯ್ ಸ್ವಾಮಿ ದೇವಸ್ಥಾನದಿಂದ ಮೂರ್ತಿಯನ್ನು ತಂದು ಇಲ್ಲಿ ಪ್ರತಿಷ್ಠಾಪಿಸಲು ಸೂಚಿಸುತ್ತಾರೆ. ಆ ದೇವಾಲಯದಲ್ಲಿ ಬೇಡರಾಯ್ ಸ್ವಾಮಿ, ಚೆನ್ನಕೇಶವ ಸ್ವಾಮಿ ಮತ್ತು ಮಹಾಲಕ್ಷ್ಮಿ ವಿಗ್ರಹಗಳು ಇದ್ದವು. ಅಲ್ಲಿಂದ ಚೆನ್ನಕೇಶವ ಮೂರ್ತಿಯನ್ನು ತಂದು ಇಲ್ಲಿ ಪ್ರತಿಷ್ಠಾಪಿಸಲಾಯಿತು. ಹಾಗು ಭಗ್ನಗೊಂಡಿದಂತಹ ಚೆನ್ನಕೇಶವ ಮೂರ್ತಿಯನ್ನು ವಿದಿ-ವಿಧಾನಗಳೊಂದಿಗೆ ವಿಸರ್ಜನೆ ಮಾಡಲಾಯಿತು.
ಕೈದಾಳವು ಶತಮಾನಗಳ ಹಿಂದೆ ಗುಬ್ಬಿ, ಕುಣಿಗಲ್ ಮತ್ತು ತುಮಕೂರು ಎಲ್ಲಾ ಪಟ್ಟಣಗಳು ಸೇರಿ ಅಷ್ಟು ದೊಡ್ಡದಾದ ಪಟ್ಟಣವಾಗಿ ಇದ್ದಂತ ಸ್ಥಳವಾಗಿತ್ತು. ಅಷ್ಟು ದೊಡ್ಡದಾದ ಪಟ್ಟಣಕ್ಕೆ ಈ ಕೈದಾಳವು ರಾಜಧಾನಿ ಪ್ರದೇಶವಾಗಿತ್ತು. ಕೈ + ದಳ ಸೇರಿ ಈ ಪಟ್ಟಣವು ಕೈದಾಳವಾಗಿದೆ.
ಕೈದಳ ಪಟ್ಟಣದಲ್ಲಿ ಗಂಗಾಧರೇಶ್ವರ ದೇವಾಲಯದಲ್ಲಿ ಸಿಕ್ಕಂತ ಶಾಸನಗಳ ಪ್ರಕಾರ ಈ ದೇವಾಲಯವು ತುಂಬಾ ಹಳೆಯದಾದ ದೇವಾಲಯವಾಗಿದೆ. ಗಂಗಾಧರೇಶ್ವರ ದೇವಾಲಯದಲ್ಲಿ ಎರಡು ಶಾಸನಗಳಿವೆ ಆ ಶಾಸನಗಳ ಪ್ರಕಾರ ಕೈದಾಳವು ಕ್ರಿ.ಶ. 897 ಇಸವಿಯಲ್ಲಿ ಅಂದರೆ 9ನೇ ಶತಮಾನದಲ್ಲಿ ಅಮೋಘ ವರ್ಷ ನೃಪತುಂಗನ ಮಗ 1ನೇ ಕೃಷ್ಣ ತಂದೆ ಅಮೋಘವರ್ಷ ನೃಪತುಂಗನ ಜೊತೆ ಜಗಳವಾಡಿಕೊಂಡು ಕೈದಾಳಕ್ಕೆ ಬಂದು ಇಲ್ಲಿ ನೆಲೆಸುತ್ತಾನೆ. ಅಮೋಘವರ್ಷ ತನ್ನ ಮಗನಿಗೆ ಬುದ್ಧಿ ಕಲಿಸಲು ಸೇನಾಧಿಪತಿ ಬಂಕೇಶ ಎಂಬುವವನನ್ನು ಇಲ್ಲಿಗೆ ಕಳಿಸುತ್ತಾನೆ ಮತ್ತು ಬಂಕೇಶ ಇಲ್ಲಿ ದಾಳಿ ಮಾಡುತ್ತಾನೆ.
ಭೇಟಿ ನೀಡಿ