ಹುಲಿಯೂರುದುರ್ಗ ಕುಂಭಿಬೆಟ್ಟವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಇರುವ ಬೆಟ್ಟವಾಗಿದೆ. ಈ ಕೋಟೆಯನ್ನು ಅಥವಾ ಬೆಟ್ಟ ಏರಲು ದುರ್ಗಮವಾಗಿದ್ದು, ಬೆಟ್ಟದ ಮೇಲೆ ಕೆಂಪೇಗೌಡರ ಏಳು ಸುತ್ತಿನ ಕೋಟೆಯನ್ನು ನಿರ್ಮಿಸಿದರು. ಕೆಂಪೇಗೌಡರು ನಿರ್ಮಿಸಿದ 09 ಕೋಟಿಗಳಲ್ಲಿ ಈ ಕೋಟೆಯು ಕೂಡ ಒಂದು. ಕೆಂಪೇಗೌಡರು ಈ ಕೋಟೆಯನ್ನು ಆಳಿದ ನಂತರ ಈ ಸ್ಥಳವನ್ನು ಟಿಪ್ಪು ಸುಲ್ತಾನನು ಆಕ್ರಮಿಸಿಕೊಳ್ಳುತ್ತಾನೆ.
ಈ ಕೋಟೆಯು ಬೆಂಗಳೂರಿನಿಂದ 108 ಕಿ.ಮೀ ಮತ್ತು ತುಮಕೂರಿನಿಂದ 66 ಕಿ.ಮೀ ದೂರದಲ್ಲಿದೆ. ಹಾಗೂ ಕುಣಿಗಲ್ ತಾಲೂಕಿನಿಂದ 25 ಕಿ.ಮೀ ದೂರದಲ್ಲಿದೆ.
ಈ ಕೋಟೆಯ ಮೇಲೆ ಒಂದು ಉಗ್ರಾಣ ಇದ್ದು ಮತ್ತ್ತೆ ಯಾವುದೇ ರೀತಿಯ ಅವಶೇಶಗಳು ಇಲ್ಲ. ಈ ಕೋಟೆಯನ್ನು ಹತ್ತಲು ಅಥವಾ ಏರಲು ಒಂದು ಸಾಹಸಮವಾಗಿದೆ. ಚಾರಣ ಪ್ರಿಯರಿಗೆ ಮತ್ತು ಹಳೆ ಕಾಲದ ಕೋಟೆಗಳ ಬಗ್ಗೆ ಮಾಹಿತಿ ತಿಳಿಯಲು ಉತ್ತಮ ಸ್ಥಳವಾಗಿದೆ.
ಭೇಟಿ ನೀಡಿ