ಕುಣಿಗಲ್ ದೊಡ್ಡ ಕೆರೆಯು ಕರ್ನಾಟಕದ ರಾಜ್ಯದ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿದೆ. ಕುಣಿಗಲ್ ರೇಷ್ಮೆ ಕೃಷಿಗೆ ಪ್ರಖ್ಯಾತಿ ಪಡೆದಿದೆ. ಈ ಕೆರೆಯು ಹಲವಾರು ಶತಮಾನಗಳನ್ನು ಕಂಡಿದೆ. ಕರ್ನಾಟಕದಾದ್ಯಂತ ಪ್ರಖ್ಯಾತಿಯಾದ ಜಾನಪದ ಹಾಡೊಂದನ್ನು ಸಹ ಈ ಕೆರೆ ಹೊಂದಿದೆ. ಮುಡಲ್ ಕುಣಿಗಲ್ ಕೆರೆ ನೋಡೋಕ್ ಒಂದ್ ಐಭೋಗ ಮೂಡಿ ಬರ್ತಾನೆ ಚಂದಿರ್ ರಾಮ ತಾನೊಂದಾನೊ ಮೂಡಿ ಬರ್ತಾನೆ ಚಂದಿರ್ ರಾಮ… ಈ ಹಾಡು ಇಂದಿನ ಹಲವಾರು ಚಲನಚಿತ್ರಗಳಲ್ಲು ಬಳಕೆಯಾಗಿದೆ.
ಈ ಕೆರೆಯು ಬೆಂಗಳೂರಿಂದ ಸುಮಾರು 78 ಕಿ.ಮೀ ಮತ್ತು ತುಮಕೂರಿನಿಂದ 42 ಕಿ.ಮೀ ದೂರದಲ್ಲಿದೆ. ಹಾಗೂ ಕುಣಿಗಲ್ ನಿಂದ ಕೇವಲ 02 ಕಿ.ಮೀ ದೂರದಲ್ಲಿದೆ.
ಭೇಟಿ ನೀಡಿ




