ಮೂಲೆ ಶಂಕರೇಶ್ವರ ದೇವಸ್ಥಾನ

ಮೂಲೆ ಶಂಕರ ದೇವಾಲಯ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಇರುವ ಒಂದು ಅದ್ಭುತ ದೇವಾಲಯವಾಗಿದೆ. ಈ ದೇವಾಲಯವು ಈಶ್ವರ ದೇವಾಲಯವಾಗಿದೆ. ಈ ದೇವಾಲಯವು ಶೈಲಿಯಲ್ಲಿ ಭೂಮಿಜ ನಿರ್ಮಾಣವಾಗಿದೆ. ಇದನ್ನು ಹೊಯ್ಸಳರ 3ನೇ ನರಸಿಂಹ ರಾಜನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ದೇವಾಲಯವು ಕರ್ನಾಟಕದಲ್ಲಿ ಅತ್ಯಂತ ವಿಶಿಷ್ಟವಾದ ದೇವಾಲಯವಾಗಿದೆ. ಕರ್ನಾಟಕದಲ್ಲಿ ಭೂಮಿಜ ಮಾದರಿಯಲ್ಲಿ ಇರುವಂತಹ ಎರಡು ದೇವಾಲಯಗಳಲ್ಲಿ ಇದು ಒಂದು ಕೂಡ ಆಗಿದೆ. ಇನ್ನೊಂದು ದೇವಾಲಯ ಎಂದರೆ ಅದು ನುಗ್ಗೆಹಳ್ಳಿಯ ಸದಾಶಿವ ದೇವಾಲಯ.

ಈ ದೇವಾಲಯ ಬೆಂಗಳೂರಿನಿಂದ 124 ಕಿ.ಮೀ ಮತ್ತು ತುಮಕೂರು ನಗರದಿಂದ 70 ಕಿ.ಮೀ ದೂರದಲ್ಲಿದೆ. ಹಾಗೂ ತುರುವೇಕೆರೆ ನಗರದಿಂದ 02 ಕಿ.ಮೀ ಮತ್ತು ಬಾಣಸಂದ್ರ ರೈಲ್ವೆ ನಿಲ್ದಾಣದಿಂದ 12 ಕಿ.ಮೀ ದೂರದಲ್ಲಿದೆ.

ಈ ದೇವಾಲಯವು ಒಟ್ಟು 64 ಮೂಲೆಗಳನ್ನು ಹೊಂದಿದೆ ಮತ್ತು ಈ ದೇವಸ್ಥಾನವನ್ನು ಶಿಲ್ಪಿ ಜಕಣಾಚಾರ್ಯ ಕಟ್ಟಿಸಿದ ಎಂಬ ಪ್ರತೀತಿ ಇದೆ. ಈ ದೇವಾಲಯವು ಪೂರ್ವಾಭಿಮುಖವಾಗಿ ದೇವಾಲವಯವಿದ್ದು ದಕ್ಷಿಣಾಭಿಮುಖವಾಗಿ ಪ್ರವೇಶ ದ್ವಾರ ಇದೆ. ದೇವಾಯಲಯ ನಿರ್ಮಾಣದ ಐತಿಹಾಸಿಕವಾಗಿ ಹೇಳುವುದಾದರೆ, ಇದೆ ಊರಿನಲ್ಲಿ ಇರುವ ಐತಿಹಾಸಿಕವಾಗಿ ದೇವಾಲಯ ಚೆನ್ನಕೇಶವ ದೇವಾಲಯ, ಅದರ ಒಂದು ಶಾಸನದ ಪ್ರಕಾರ 1258 ಸುಮಾರಿಗೆ ಈ ದೇವಾಲಯ ನಿರ್ಮಾಣವಾಗಿದೆ ಎಂಬ ಮಾಹಿತಿ ಇದೆ.

ಭೇಟಿ ನೀಡಿ
ತುರುವೇಕೆರೆ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು