ನಿಡಗಲ್ ಬೆಟ್ಟ

ನಿಡಗಲ್ ಬೆಟ್ಟವು ಅಥವಾ ಕೋಟೆಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಐತಿಹಾಸಿಕ ಪುರಾತನ ಕೋಟೆ ಬೆಟ್ಟವಾಗಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1241 ಮೀಟರ್ ಎತ್ತರದಲ್ಲಿದೆ. ಈ ಊರು ನಿಡಿದಾದ ಬೆಟ್ಟಗಳಿಂದ ಕೂಡಿದ್ದರಿಂದ ಈ ಊರಿಗೆ ನಿಡಗಲ್ ಎಂದು ಕರೆಯುತ್ತಾರೆ.

ಈ ಬೆಟ್ಟವು ಬೆಂಗಳೂರಿನಿಂದ 180 ಕಿ.ಮೀ ಮತ್ತು ಪಾವಗಡ ನಗರದಿಂದ 27 ಕಿ.ಮೀ ದೂರದಲ್ಲಿದೆ.

ಈ ಕೋಟೆಯು ಒಟ್ಟು ಆರು ಸುತ್ತಿನ ಕೋಟೆಯಾಗಿದೆ ಮೊದಲನೇ ಸುತ್ತಿನ ಕೋಟೆಯನ್ನು ಕಾಳಗಿ ಅಥವಾ ಕಾಳಹಸ್ತಿ ಎಂದು ಕರೆಯುತ್ತಾರೆ. ಎರಡನೇ ಸುತ್ತನ್ನು ಭೈರವನು ಕೋಟೆ, ಮೂರನೇ ಸುತ್ತನ್ನು ಬಸವನಕೋಟೆ, ಎಂದು ಕರೆಯುತ್ತಾರೆ ನಾಲ್ಕನೆಯದು ಚನ್ನರಾಯನ ಕೋಟೆ, ಐದನೆಯದು ಅಲ್ಲಮನ ಕೋಟೆ ಅಥವಾ ಬೆಸ್ತರ ಕೋಟೆ ಮತ್ತು ಆರನೆಯದು ವೀರಭದ್ರ ಕೋಟೆ. ಆದರೆ ಈ ಕೋಟೆಯ ಆರು ಸುತ್ತುಗಳು ಕಾಣಿಸುವುದಿಲ್ಲ ಕಾರಣ ಬಿದ್ದು ಹೋಗಿದ್ದೆ.

11ನೇ ಶತಮಾನದ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಚೋಳರು, ಹೊಯ್ಸಳರು ಮತ್ತು ಉತ್ತರದಲ್ಲಿ ಕಲ್ಯಾಣ ಚಾಲುಕ್ಯರು ಆಳ್ವಿಕೆ ಬಲಿಷ್ಠವಾಗಿ ನಡೆಸುತ್ತಿದ್ದರು. ಅವರು ತಮ್ಮ ತಮ್ಮ ರಾಜ್ಯಗಳ ಮೇಲೆ ಯಾವಾಗ ಯುದ್ಧ ನಡೆಸುತ್ತಾರೆ ಎಂಬ ಭಯ ಇತ್ತು .ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಿಡಗಲ್ ಚೋಳರು ಆಳ್ವಿಕೆಗೆ ಬರುತ್ತಾರೆ. ಇವರು ತಮ್ಮನ್ನು ಕಾಲ ಚೋಳರು ಎಂದು ಕರೆದುಕೊಳ್ಳುತ್ತಾರೆ. 11ನೇ ಶತಮಾನದಿಂದ 13ನೇ ಶತಮಾನದ ವರೆಗೆ ಸುಮಾರು ಮೂರು ಶತಮಾನಗಳ ಇಲ್ಲಿ ಚೋಳರು ಇಲ್ಲಿ ಆಡಳಿತವನ್ನು ನಡೆಸುತ್ತಾರೆ.

ಈ ಶಿಥಿಲಗೊಂಡ ಸ್ಮಾರಕಗಳ ಮೇಲೆ ಕಣ್ಣಿಡಲು ಬಯಸುವವರಿಗೆ, ಶಿಖರದತ್ತ ಚಾರಣ ಮಾಡುವುದು ಸ್ವಲ್ಪ ಕಷ್ಟಕರವೆನಿಸಬಹುದು ಏಕೆಂದರೆ ಅಲ್ಲಿ ಸರಿಯಾದ ಮೆಟ್ಟಿಲುಗಳಿಲ್ಲ. ದಾರಿಯುದ್ದಕ್ಕೂ ಕಲ್ಲು ಮತ್ತು ಗಾರೆಯಿಂದ ಮಾಡಿದ ಸೈನಿಕರಿಗೆ ಹಾಳಾದ ವಸತಿ ಸೌಕರ್ಯವಿದೆ.

ಇಲ್ಲಿ ಶಿವನ ಒಂದು ರೂಪವಾದ ರಾಮಲಿಂಗೇಶ್ವರನಿಗೆ ಅರ್ಪಿತವಾದ ದೇವಾಲಯವಿದೆ. ಶಾಸನಗಳ ಪ್ರಕಾರ, ಲಿಂಗವನ್ನು ಕಾಳಹಸ್ತಿಯಿಂದ ತರಲಾಗಿದೆ. ಬೆಟ್ಟದ ಮೇಲೆ ನಂದಿ ಪ್ರತಿಮೆ ಮತ್ತು ಅಗ್ನಿ ಪಾತ್ರೆಯೂ ಇದೆ. ಶ್ರಾವಣ ಮಾಸದ ಸಮಯದಲ್ಲಿ ಇಲ್ಲಿ ಬೆಂಕಿ ಹಚ್ಚಲಾಗುತ್ತದೆ. ಇಲ್ಲಿ ಸಾಮಾನ್ಯವಾಗಿ ದೊಡ್ಡ ಜಾತ್ರೆಯನ್ನು ಆಯೋಜಿಸಲಾಗುತ್ತದೆ, ಇದನ್ನು ಬಸವಣ್ಣ ಜಾತ್ರೆ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.

ಭೇಟಿ ನೀಡಿ
ಪಾವಗಡ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು