ಹಂಪಿ ಮೃಗಾಲಯವು ಕರ್ನಾಟಕದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಮಲಾಪುರ ವ್ಯಾಪ್ತಿಯಲ್ಲಿರುವ ಪ್ರಾಣಿಸಂಗ್ರಹಾಲಯವಾಗಿದೆ. ಕಮಲಾಪುರದಿಂದ ಪಾಪಿನಾಯಕನಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದ ಮಧ್ಯದಲ್ಲಿ ಈ ಮೃಗಾಲಯವಿದೆ. ಇದನ್ನು ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಸಂಗ್ರಹಾಲಯ (Atal Bihari Vajpayee Zoological Park) ಎಂದೂ ಕರೆಯಲಾಗುತ್ತದೆ.
ಹಂಪಿ ಮೃಗಾಲಯದ ದೂರಗಳು
- ಬೆಂಗಳೂರು – 329 ಕಿ.ಮೀ
- ಹೊಸಪೇಟೆ – 12 ಕಿ.ಮೀ
- ಹೊಸಪೇಟೆ ರೈಲ್ವೆ ನಿಲ್ದಾಣ – 13 ಕಿ.ಮೀ
ಈ ಮೃಗಾಲಯವನ್ನು 01-10-1981ರಂದು 2.4 ಹೆಕ್ಟೇರ್ ಪ್ರದೇಶದಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ಸುಮಾರು 141 ಹೆಕ್ಟೇರ್ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಉದ್ಯಾನವು ವನ್ಯಜೀವಿ ಸಂರಕ್ಷಣೆ, ಪ್ರಾಣಿಗಳ ವೀಕ್ಷಣೆ ಮತ್ತು ಸಫಾರಿ ಸೌಲಭ್ಯಗಳನ್ನು ಒಳಗೊಂಡಿದೆ.
ಪ್ರಕೃತಿ ಶಿಕ್ಷಣವನ್ನು ಒದಗಿಸುವುದು, ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸ್ಥಳೀಯ ಜನರಿಗೆ ವಿಶ್ರಾಂತಿ ಮತ್ತು ಮನರಂಜನೆಗಾಗಿ ಸೂಕ್ತ ಸ್ಥಳವನ್ನು ಕಲ್ಪಿಸುವ ಉದ್ದೇಶದಿಂದ ಈ ಮೃಗಾಲಯವನ್ನು ಸ್ಥಾಪಿಸಲಾಯಿತು.
ಭೇಟಿ ನೀಡಿ
ಭೇಟಿ ನೀಡಿ











