ಜಲಶಂಕರ ಬೆಟ್ಟ ಮತ್ತು ದೇವಾಲಯವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಮುದ್ರಣಕಾಶಿ ಎಂಬ ಹಳ್ಳಿಯಲ್ಲಿ ಇದೆ. ಈ ಸ್ಥಳವು ಒಂದು ಪ್ರೇಕ್ಷಣೀಯ ಸ್ಥಳವಾಗಿದ್ದು ಮತ್ತು ಪ್ರವಾಸಿಗರಿಗೆ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.
ಈ ಸ್ಥಳವು ಬೆಂಗಳೂರಿನಿಂದ 416 ಕಿ.ಮೀ ಮತ್ತು ಹುಬ್ಬಳ್ಳಿ ನಗರ ದಿಂದ 67 ಕಿಮೀ ದೂರದಲ್ಲಿದೆ. ಹಾಗೂ ಗದಗ ನಗರದಿಂದ ರಸ್ತೆ ಮಾರ್ಗವಾಗಿ ಕೇವಲ 11 ಕಿ.ಮೀ ಮತ್ತು ಗದಗ ರೈಲ್ವೆ ನಿಲ್ದಾಣದಿಂದ 13 ಕಿ.ಮೀ ದೂರದಲ್ಲಿದೆ.
ಜಲಶಂಕರ ದೇವಾಲಯ
ಜಲಶಂಕರ ದೇವಾಲಯವು ವಿಹಾರಕ್ಕೆ ಸೂಕ್ತವಾದ ಸ್ಥಳವಾಗಿದೆ. ಗದಗ್‌ನಿಂದ ಸ್ವಲ್ಪ ದೂರದಲ್ಲಿರುವ ಜಲಶಂಕರ ದೇವಾಲಯವು ಹೆಚ್ಚು ಸ್ಥಳೀಯ ಧಾರ್ಮಿಕರಿಗೆ ಶಿವನ ಆರಾಧನೆಗೆ ಸೂಕ್ತವಾದ ಸ್ಥಳವಾಗಿದೆ. ಸುಂದರವಾದ ಮತ್ತು ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವು ಪ್ರಾಕೃತಿಕ ಸೌಂದರ್ಯದ ಮಧ್ಯೆ ನಿರ್ಮಾಣವಾಗಿರುವ ದೇವಾಲಯ ವಾಗಿದೆ.
ಈ ದೇವಾಲಯವು ಬೆಳ್ಳಿಗ್ಗೆ 08.00 ರಿಂದ ರಾತ್ರಿ 07.00 ರವರೆಗೆ ತೆರೆದಿರುತ್ತದೆ.
ಜಲಶಂಕರ ಸಮಿತಿಯಿಂದ ಮತ್ತು ಗ್ರಾಮಸ್ಥರ ಒಳಗೊಂದು ಪ್ರೀತಿಯಿಂದ ಮರು-ನಿರ್ಮಿಸಿದ ನೂರು ವರ್ಷಗಳಷ್ಟು ಹಳೆಯದಾದ ಶಿವನ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುವ ಅವಕಾಶವನ್ನು ನೀಡುತ್ತದೆ. ಭಕ್ತರೇ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಈ ದೇವಾಲಯದಲ್ಲಿ ಸಂಕ್ರಾಂತಿಯಂದು ವಾರ್ಷಿಕ ಜಾತ್ರೆಯ ಉತ್ಸವವು ವರ್ಷಕ್ಕೊಮ್ಮೆ ನಡೆಯುವುದು. ಈ ಕಾಲದಲ್ಲಿ ರಾಜ್ಯದ ಇತರ ಭಾಗಗಳಿಂದ ಭಕ್ತರು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ.
ಈ ದೇವಾಲಯದ ಮೂಲಕ ಹಾದು ಹೋಗುವ ಚಿಲುಮೆಯು ಎಂದಿಗೂ ಬತ್ತಿ ಹೋಗಿಲ್ಲ ಎಂಬ ಖ್ಯಾತಿಯನ್ನು ಹೊಂದಿದೆ. ಬಾವಿಯಂತಹ ಹೊಂಡವು ಆಕಾಶ ನೀಲಿ ಬಣ್ಣದ ನೀರನ್ನು ಹೊಂದಿರುತ್ತದೆ ಮತ್ತು ಕೆಳಗಿನ ಕಣಿವೆಯ ಅದ್ಭುತ ನೋಟವನ್ನು ನೀಡುತ್ತದೆ.
ಭೇಟಿ ನೀಡಿ