ಮೈಸೂರು ರಸಂ

ಕರ್ನಾಟಕದಲ್ಲಿ ಟೊಮಾಟೊ ಸಾರು ಎಂದು ಖ್ಯಾತಿ ಹೊಂದಿರುವ ಈ ಮೈಸೂರ್ ರಸಂ ಒಂದು ಸಂಪ್ರದಾಯಿಕೆ ಆಹಾರವಾಗಿ ನಿಂತಿದೆ. ಮದುವೆ ಹಾಗು ಇತರೆ ಹಬ್ಬಗಳಲ್ಲಿ ತುಂಬ ವಿಶೇಷವಾಗಿ ತಯಾರಿಸುವ ಈ ಮೈಸೂರ್ ರಸಂ ಆರೋಗ್ಯದಾಯಕವೂ ಹೌದು. ಗಮ ಗಮ ಸುವಾಸನೆಯುಳ್ಳ ಈ ರಸಂ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಇದನ್ನು ಅನ್ನದೊಂದಿಗೆ ಸೇವಿಸಲಾಗುತ್ತದೆ ಮತ್ತು ಈ ರಸಂ ಅನ್ನು ಹಾಗೆಯೆ ಕುಡಿಯಬಹುದಾಗಿದೆ.

ಈ ರಸಂ ಗೆ ಉಪಯೋಗಿಸಿರುವ ಎಲ್ಲ ಪದಾರ್ಥಗಳು ಕೂಡ ಆರೋಗ್ಯದಾಯಕವಾಗಿದೆ. ಮೈಸೂರು ರಸಂ ಅನ್ನು ದಾಲ್, ಟೊಮೆಟೊ, ತೆಂಗಿನಕಾಯಿ, ಮೈಸೂರು ರಸಂ ಪುಡಿ ಅಥವಾ ಸಾರಿನ ಪುಡಿ,
ಹುಣಸೆಹಣ್ಣು, ಬೆಲ್ಲ ಮತ್ತು ಉಪ್ಪು ಉಪಯೊಗಿಸಿ ತಯಾರಿಸುತ್ತಾರೆ. ಹಾಗೆ ರಸಂ ಪುಡಿ ಅಥವಾ ಸಾರಿನ ಪುಡಿಯನ್ನು ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜಗಳು, ಜೀರಿಗೆ, ಮೆಂತ್ಯ ಕಾಳುಗಳು, ಮೆಣಸು, ಇಂಗು ಮತ್ತು ಸಾಸಿವೆ ಕಾಳುಗಳನ್ನು ಬಳಸಿ ತಯಾರಿಸುತ್ತಾರೆ.