ನುಚ್ಚಿನುಂಡೆ

ನವರಾತ್ರಿಯಲ್ಲಿ ಹಾಗು ನಾಗರಪಂಚಮಿಯಲ್ಲಿ ವಿಷೇಶವಾಗಿ ತಯಾರಿಸುವ ಈ ತೊಗರಿ ನುಚ್ಚಿನುಂಡೆಯು ಹಳೆ ಕಾಲದ ತಿನಿಸಾಗಿದೆ. ಇದು ಖಾರದ ರುಚಿಯನ್ನು ಹೊಂದಿರುತ್ತದೆ. ಇದನ್ನು ಕಡೆಲೆ ಬೆಳೆ ಉಪಯೋಗಿಸಿ ಸಹ ತಯಾರಿಸುತ್ತಾರೆ. ಇದೊಂದು ಆರೋಗ್ಯಕರ ತಿನಿಸಾಗಿದೆ.

ಈ ನುಚ್ಚಿನುಂಡೆಯನ್ನು ನೀರಿನಲ್ಲಿ ನೆನೆಸಿಟ್ಟ ತೊಗರಿಬೇಳೆ, ಹಸಿ ಮೆಣಸಿನಕಾಯಿ, ಶುಂಠಿ, ತೆಂಗಿನತುರಿ, ಸಬ್ಬಸ್ಸಿಗೆ ಸೊಪ್ಪು, ಉಪ್ಪು, ಜೀರಿಗೆ ಸೇರಿಸಿ ಮಿಕ್ಸಿ ಯಲ್ಲಿ ರುಬ್ಬಿಕೊಂಡು ಉಂಡೆ ಕಟ್ಟಿ ಇಡ್ಲಿ ಪ್ಯಾನ್ ನಲ್ಲಿ ಇಟ್ಟು ಬೇಯಿಸಿ ತಯಾರಿಸಲಾಗುತ್ತದೆ. ಎಲ್ಲರು ಇಷ್ಟ ತಿನ್ನುವ ಈ ನುಚ್ಚಿನ ಉಂಡೆಯಲ್ಲಿ ಹೆಚ್ಚು ಪ್ರೋಟೀನ್ ಇರುತ್ತದೆ.