ಶ್ರೀ ಶ್ರೀ ನಾಕೋಡ ಅವಂತಿ 108 ಪಾರ್ಶ್ವನಾಥ ಜೈನ ತೀರ್ಥ ಧಾಮ

ಶ್ರೀ ಶ್ರೀ ನಾಕೋಡ ಅವಟಿ 108 ಪಾರ್ಶ್ವನಾಥ ಜೈನ ದೇವಾಲಯ ಇದು ಪ್ರಸಿದ್ಧ ಆಧ್ಯಾತ್ಮಿಕ ತಾಣವಾಗಿದೆ. ಈ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಇರುವ ಪ್ರಸಿದ್ಧ ಜೈನ ದೇವಾಲಯವಾಗಿದೆ. ಈ ದೇವಾಲಯವು ಹಿಂದಿನ ವಾಸ್ತುಶಿಲ್ಪವನ್ನು ಒಳಗೊಂಡಿರುವ 108 ಜೈನ ದೇವಾಲಯಗಳನ್ನು ಹೊಂದಿದೆ ಹಾಗೂ ಇದು ಭಾರತದ ಅತಿದೊಡ್ಡ ಜೈನ ದೇವಾಲಯಗಳಲ್ಲಿ ಒಂದಾಗಿದೆ.

ಈ ಜೈನ ದೇವಾಲಯವು ಬೆಂಗಳೂರಿನಿಂದ 39 ಕಿ.ಮೀ ಮತ್ತು ದೇವನಹಳ್ಳಿ ನಗರದಿಂದ ಕೇವಲ 01 ಕಿ.ಮೀ ದೂರದಲ್ಲಿದೆ.

ಇತಿಹಾಸ ಪ್ರಿಯರಿಗೆ ಇದು ಒಂದು ಉತ್ತಮ ಸ್ಥಳವಾಗಿದೆ. ಶ್ರೀ ನಾಕೋಡ ಅವಟಿ 108 ಪಾರ್ಶ್ವನಾಥ ಜೈನ ದೇವಾಲಯದ ಬಗ್ಗೆ ಹೇಳುವುದಾದರೆ ಟೆಂಪಲ್ ಟ್ರಸ್ಟ್ ಅಧ್ಯಕ್ಷ ರಾಜೇಶ್ ಕೆ ಜೈನ್ ಅವರ ತಂದೆ 1990 ರ ದಶಕದ ಅಂತ್ಯದಲ್ಲಿ ದೇವಾಲಯದ ನಿರ್ಮಾಣಕ್ಕಾಗಿ 11 ಎಕರೆ ಭೂಮಿಯನ್ನು ದಾನ ಮಾಡಿದರು.

ಈ ದೇವಾಲಯವನ್ನು ಹೆಚ್ಚಾಗಿ ರಾಜಸ್ಥಾನದಿಂದ ತಂದ ಅಮೃತಶಿಲೆ ಮತ್ತು ಮೃದುವಾದ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ. ಇಲ್ಲಿ ಸುಮಾರು 300 ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಈ ದೇವಾಲಯದ ರಚನೆಯು ಒಂದು ವಿಶೇಷವಾಗಿದೆ ಹಾಗೂ ಮುಖ್ಯ ಸ್ಥಳದಲ್ಲಿ ನಿರ್ಮಿತವಾಗಿದೆ. ಆದ್ದರಿಂದ ಶ್ರೀ ನಾಕೋಡ ಅವತಿ 108 ದೇವಾಲಯವನ್ನು ಭಾರತದ ಅತಿದೊಡ್ಡ ಜೈನ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದರೆ ಇತರ ದೇವಾಲಯಗಳಿಗಿಂತ ಭಿನ್ನವೆನ್ನಲೂ ಇದರ ಕೇಂದ್ರ ಮುಖ್ಯ ದೇವಾಲಯವು 108 ಸಣ್ಣ ದೇವಾಲಯಗಳಿಂದ ಸುತ್ತುವರಿದಿದೆ.

ದೇವಾಲಯದ ಸಂಕೀರ್ಣವನ್ನು ಪ್ರವೇಶಿಸುತ್ತಿದ್ದಂತೆ, ಪ್ರಶಾಂತ ವಾತಾವರಣ ಮತ್ತು 117 ಗೋಪುರಗಳ ಮೇಲೆ ಸಣ್ಣ ಘಂಟೆಗಳ ನಾದವು ದೈವಿಕ ಭಾವನೆಗಳನ್ನು ತುಂಬುತ್ತದೆ. ಚಾಲ್ತಿಯಲ್ಲಿರುವ ಮೌನವು ಆಧ್ಯಾತ್ಮಿಕ ಜಾಗೃತಿಯನ್ನು ನೀಡುತ್ತದೆ, ಅಲ್ಲದೆ ವಾಸ್ತುಶಿಲ್ಪವು ನಿಮ್ಮನ್ನು ಆಕರ್ಷಿಸುತ್ತದೆ. ಎಲ್ಲಾ ಗೋಪುರಗಳ ವಿಗ್ರಹದ ಶೈಲಿ ಮತ್ತು ಆಕಾರದಲ್ಲಿ ವಿಭಿನ್ನವಾಗಿವೆ. ವೈಶಿಷ್ಟ್ಯಗಳನ್ನು ಸಹ ಸೇರಿಸೀರುವುದರಿಂದ, ಆಕರ್ಷಕವಾದ ಫ್ಲೋರಿಂಗ್ ಮಾದರಿಯು ನಿಮ್ಮ ಗಮನವನ್ನು ಸೆಳೆಯುತ್ತದೆ. ಕೆಲವು ಪಾರ್ಶ್ವನಾಥರು ಅಮೃತಶಿಲೆಯ ಶಿಲ್ಪಗಳನ್ನು ಹೊಂದಿದೆ. ದೇವಾಲಯದಲ್ಲಿ ಎಲ್ಲಾ 108 ತೀರ್ಥಂಕರರ ವಿಗ್ರಹಗಳನ್ನು ಹೊಂದಿದೆ. ನೀವು ದೇವಾಲಯದ ಅನ್ವೇಷಣೆಯನ್ನು ಪೂರ್ಣಗೊಳಿಸಿದಾಗ ಮತ್ತು ಅದರ ಗಮನಾರ್ಹ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ಮೆಚ್ಚಿದಾಗ ಮನವು ಮುದಗೊಳ್ಳುವುದು.

ಭೇಟಿ ನೀಡಿ
ದೇವನಹಳ್ಳಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section