ಶ್ರೀ ಶ್ರೀ ನಾಕೋಡಾ ಅವಟಿ 108 ಪಾರ್ಶ್ವನಾಥ ಜೈನ ದೇವಾಲಯವು ಪ್ರಸಿದ್ಧ ಆಧ್ಯಾತ್ಮಿಕ ತಾಣವಾಗಿದೆ. ಈ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಇರುವ ಪ್ರಮುಖ ಜೈನ ದೇವಾಲಯವಾಗಿದೆ. ಈ ದೇವಾಲಯವು ಪಾರಂಪರಿಕ ವಾಸ್ತುಶಿಲ್ಪವನ್ನು ಒಳಗೊಂಡಿರುವ 108 ಜೈನ ಮಂದಿರಗಳನ್ನು ಹೊಂದಿದ್ದು, ಇದು ಭಾರತದ ಅತಿ ದೊಡ್ಡ ಜೈನ ದೇವಾಲಯಗಳಲ್ಲಿ ಒಂದಾಗಿದೆ.
ಈ ಜೈನ ದೇವಾಲಯವು ಬೆಂಗಳೂರಿನಿಂದ 39 ಕಿ.ಮೀ ಮತ್ತು ದೇವನಹಳ್ಳಿ ನಗರದಿಂದ ಕೇವಲ 1 ಕಿ.ಮೀ ದೂರದಲ್ಲಿದೆ.
ಇತಿಹಾಸ ಪ್ರಿಯರಿಗೆ ಇದು ಒಂದು ಉತ್ತಮ ಸ್ಥಳವಾಗಿದೆ. ಶ್ರೀ ನಾಕೋಡಾ ಅವಟಿ 108 ಪಾರ್ಶ್ವನಾಥ ಜೈನ ದೇವಾಲಯದ ಬಗ್ಗೆ ಹೇಳುವುದಾದರೆ, ಟೆಂಪಲ್ ಟ್ರಸ್ಟ್‌ನ ಅಧ್ಯಕ್ಷ ರಾಜೇಶ್ ಕೆ. ಜೈನ್ ಅವರ ತಂದೆಯವರು 1990ರ ದಶಕದ ಅಂತ್ಯದಲ್ಲಿ ದೇವಾಲಯದ ನಿರ್ಮಾಣಕ್ಕಾಗಿ 11 ಎಕರೆ ಭೂಮಿಯನ್ನು ದಾನ ಮಾಡಿದರು.
ಈ ದೇವಾಲಯವನ್ನು ಮುಖ್ಯವಾಗಿ ರಾಜಸ್ಥಾನದಿಂದ ತಂದ ಅಮೃತಶಿಲೆ ಮತ್ತು ಮೃದುವಾದ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ. ಇಲ್ಲಿ ಸುಮಾರು 300 ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಈ ದೇವಾಲಯದ ರಚನೆ ಅತ್ಯಂತ ವಿಶೇಷವಾಗಿದ್ದು, ಇದು ಪ್ರಮುಖ ಸ್ಥಳದಲ್ಲಿ ನಿರ್ಮಿತವಾಗಿದೆ. ಆದ್ದರಿಂದ ಶ್ರೀ ನಾಕೋಡಾ ಅವಟಿ 108 ದೇವಾಲಯವನ್ನು ಭಾರತದ ಅತಿದೊಡ್ಡ ಜೈನ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇತರ ದೇವಾಲಯಗಳಿಗಿಂತ ಭಿನ್ನವೆಂದರೆ, ಇದರ ಕೇಂದ್ರ ಮುಖ್ಯ ದೇವಾಲಯವು 108 ಸಣ್ಣ ದೇವಾಲಯಗಳಿಂದ ಸುತ್ತುವರಿದಿದೆ.
ದೇವಾಲಯದ ಸಂಕೀರ್ಣವನ್ನು ಪ್ರವೇಶಿಸುತ್ತಿದ್ದಂತೆಯೇ, ಪ್ರಶಾಂತ ವಾತಾವರಣ ಮತ್ತು 117 ಗೋಪುರಗಳ ಮೇಲಿನ ಸಣ್ಣ ಘಂಟೆಗಳ ನಾದವು ದೈವಿಕ ಭಾವನೆಗಳನ್ನು ಉಂಟುಮಾಡುತ್ತದೆ. ಅಲ್ಲಿ ಆವರಿಸಿರುವ ಮೌನವು ಆಧ್ಯಾತ್ಮಿಕ ಜಾಗೃತಿಯನ್ನು ನೀಡುತ್ತದೆ, ವಾಸ್ತುಶಿಲ್ಪವು ನಿಮ್ಮನ್ನು ಆಕರ್ಷಿಸುತ್ತದೆ. ಎಲ್ಲಾ ಗೋಪುರಗಳ ವಿಗ್ರಹಗಳ ಶೈಲಿ ಮತ್ತು ಆಕಾರಗಳು ವಿಭಿನ್ನವಾಗಿವೆ. ವೈಶಿಷ್ಟ್ಯಪೂರ್ಣ ಅಲಂಕಾರಗಳನ್ನು ಸೇರಿಸಿರುವುದರಿಂದ, ಆಕರ್ಷಕವಾದ ನೆಲದ ಅಲಂಕಾರ (ಫ್ಲೋರಿಂಗ್ ಮಾದರಿ) ನಿಮ್ಮ ಗಮನವನ್ನು ಸೆಳೆಯುತ್ತದೆ. ಕೆಲವು ಪಾರ್ಶ್ವನಾಥರ ವಿಗ್ರಹಗಳು ಅಮೃತಶಿಲೆಯಿಂದ ಕೆತ್ತಲ್ಪಟ್ಟಿವೆ. ದೇವಾಲಯವು ಎಲ್ಲಾ 108 ತೀರ್ಥಂಕರರ ವಿಗ್ರಹಗಳನ್ನು ಹೊಂದಿದೆ. ದೇವಾಲಯದ ಅನ್ವೇಷಣೆಯನ್ನು ಪೂರ್ಣಗೊಳಿಸಿ, ಅದರ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ಮೆಚ್ಚಿದಾಗ, ಮನಸ್ಸು ಮುದಗೊಳ್ಳುತ್ತದೆ.
ಭೇಟಿ ನೀಡಿ





