ಮೆಥೋಡಿಸ್ಟ್ ಗುಹೆ ಚರ್ಚ್

ಮೆಥೋಡಿಸ್ಟ್ ಗುಹೆ ಚರ್ಚ್ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲೂಕು ಪಕಲವಾಡದಲ್ಲಿ ಇರುವ ಚರ್ಚ್. ಅಲ್ಬರ್ಟ್-ಈ-ಕುಕ್ ಬೀದರನಲ್ಲಿ ಮಿಷನರಿಯಾಗಿ ಸೇವೆ ಸಲ್ಲಿಸುತಿದ್ದಾಗ ಈ ಚರ್ಚ್ ಅನ್ನು 1916 ರಲ್ಲಿ ನಿರ್ಮಾಣ ಮಾಡಿದರು.

ಈ ಚರ್ಚ್ ಬೆಂಗಳೂರಿನಿಂದ 749 ಕಿ.ಮೀ (NH50 ಮೂಲಕ), 679 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 3 ಕಿ.ಮೀ ದೂರದಲ್ಲಿದೆ. ಹಾಗೂ ಬೀದರ್ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿದೆ.

ಮರ್ಜಾಪೂರ ಗ್ರಾಮದ ನಿವಾಸಿಗಳಾಗಿದ್ದ ಶ್ರೀ ಜೋಥಪ್ಪಾರವರು ಹಿಂದು ಸಾಧುಗಳಾಗಿದ್ದು, ಶ್ರೀ ಶಿವಪ್ಪ ಮತ್ತು ಶ್ರೀಮತಿ ಬಾಯಮ್ಮರವರ ಕಿರಿಯ ಮಗನಾಗಿ 27ನೇ ನವೆಂಬರ್ 1856 ರಲ್ಲಿ ಜನಿಸಿದರು.

ಕ್ರಿಸ್ತರಲ್ಲ ವಿಶ್ವಾಸಿಗಳಾಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದವರ ಮೂಲ ಆಧ್ಯಾತ್ಮಿಕ ಪ್ರೇರೆಪಕರು ಅಮೇರಿಕದ ವಂದನೀಯ (ರೆವರೆಂಡ್) ಅಲ್ಬರ್ಟ್-ಈ-ಕುಕ್ ಇವರು ಬೀದರನಲ್ಲಿ ಮಿಷನರಿಯಾಗಿ ಸೇವೆಮಾಡುವಾಗ, ಶ್ರೀಗಳು ಧರ್ಮಾವಲಂಬಿಯಾಗಿ 2ನೇ ಏಪ್ರಿಲ್ 1896 ರಲ್ಲಿ ಧರ್ಮ ದೀಕ್ಷೆಯನ್ನು ಪಡೆದರು.

ಇವರಲ್ಲಿದ್ದ ದೈವೀಕ ಪ್ರೇರಣಿಯು ಈ ಗವಿಯನ್ನು ತಮ್ಮ ಬಿಡುವಿನ ವೇಳೆಯಲ್ಲಿ ಕೊರೆಯಲು ಸ್ಪೂರ್ತಿಯಾಯಿತು. ಹಲವಾರು ವರ್ಷಗಳ ನಿರಂತರ ಭಜನೆ ಹಾಗೂ ಆರಾಧನೆಯ ನಂತರ ಈ ಗವಿಯನ್ನು ದೇವರ ಆಲಯವಾಗಿ 1916ರಲ್ಲಿ ಸಮರ್ಪಿಸಿದರು.

ಬೀದರ ಕ್ರೈಸ್ತ ಜಾತ್ರೆಯನ್ನು ಬೀದರ ನಗರದಲ್ಲಿ ಪ್ರಥಮವಾಗಿ ಪ್ರಾರಂಭಿಸಿದ ರೆವರೆಂಡ ಕೆ.ಇ. ಆಂಡರಸನ್‌ರವರಿಗೆ ಈ ಪ್ರಾರ್ಥನಾ ಗವಿಯನ್ನು 1927ರಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಅಂದಿನಿಂದ ಪ್ರತಿವರ್ಷವೂ ಈ ದೇವಾಲಯದಲ್ಲಿ ಬೀದರ ಜಾತ್ರಾ ಆರಾಧನೆ ಹಾಗೂ ಪುನರುತ್ಥಾನದ ಸೂರ್ಯೊದಯ ಪ್ರಾರ್ಥನೆಯು ಇದೇ ಗವಿಯ ಆವರಣದಲ್ಲಿ ನಡೆಸಲಾಗುತ್ತಿದೆ.