ಬಸವಣ್ಣನವರ ಅರಿವಿನ ಮನೆ ಬಸವಕಲ್ಯಾಣ

ಜಗಜ್ಯೋತಿ ಬಸವಣ್ಣನವರ ಅರಿವಿನ ಮನೆ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿ ಇದೆ. ಬಸವಣ್ಣನವರು ತ್ರಿವಿಧ ಲಿಂಗ ಪೂಜೆಯಲ್ಲಿ ನಿರತರಾಗಿದ್ದ ಈ ಪವಿತ್ರ ಸ್ಥಳವು ಅರಿವಿನ ಮನೆ ಎಂದು ಪ್ರಸಿದ್ಧವಾಗಿದೆ. ಬಸವಣ್ಣನವರ ಕಾಲ ಕ್ರಿ.ಶ. 1131 ರಿಂದ 1196 ರವರೆಗೆ ಎಂದು ದಾಖಲಾಗಿರುತ್ತದೆ.

ಈ ಸ್ಥಳವು ಬೆಂಗಳೂರಿನಿಂದ 749 ಕಿ.ಮೀ (NH50 ಮೂಲಕ), 679 ಕಿ.ಮೀ (NH44 – ಹೈದರಾಬಾದ್ ಮೂಲಕ), ಬೀದರ್‌ನಿಂದ 3 ಕಿ.ಮೀ ಮತ್ತು ಬಸವಕಲ್ಯಾಣದಿಂದ 4 ಕಿ.ಮೀ ದೂರದಲ್ಲಿದೆ.

ಬಸವಣ್ಣನವರು ಬೀಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರು. ಮುಂದೆ ಅವರು ಕಪ್ಪಡಿ ಸಂಗಮಕ್ಕೆ ಹೊರಟು ಹೋದರು. ಅಲ್ಲಿ ಗುರುಗಳಾದ ಜಾತವೇದ ಮುನಿಗಳ ಆಶ್ರಯದಲ್ಲಿ ಅವರ ಅನುಗ್ರಹದಿಂದ ಸಕಲ ವಿದ್ಯೆಯಲ್ಲಿ ಪಾರಂಗತರಾದರು. ಗುರುಗಳ ಆದೇಶದಂತೆ ಕಲ್ಯಾಣಕ್ಕೆ ಬಂದು ಬಲದೇವ ಮಂತ್ರಿಯ ಮಗಳಾದ ಗಂಗಾಂಬಿಕೆಯನ್ನು ಮದುವೆಯಾಗಿಸಿ, ಕರಣಿಕ ಕಾಯಕವನ್ನು ಕೈಗೊಂಡು ಗೃಹಸ್ಥ ಜೀವನವನ್ನು ನಡೆಸಿದರು. ಒಂದು ಸಲ ಬಿಜ್ಜಳನ ಓಲಗದಲ್ಲಿ ಲಿಪಿಯನ್ನು ಓದಿ, ಸಿಂಹಾಸನದ ಕೆಳಗಿದ್ದ ಅರವತ್ತುನಾಲ್ಕು ಹಣಧನವನ್ನು ಶೋಧಿಸಿ ಬಿಜ್ಜಳ ದೊರೆಗೆ ಸಿಗುವಂತೆ ಮಾಡಿದರು. ಇವರ ಅಗಾಧ ಜ್ಞಾನಕ್ಕೆ ಮೆಚ್ಚಿದ ದೊರೆ, ಬಸವಣ್ಣನವರಿಗೆ ಮಂತ್ರಿ ಪದವಿಯನ್ನು ನೀಡಿದಲ್ಲದೆ, ತಮ್ಮ ತಂಗಿಯಾದ ನೀಲಲೋಚನೆಯನ್ನು (ಸಿದ್ಧರಸ ಮಂತಿಯ ಮಗಳು) ಮದುವೆ ಮಾಡಿಸಿ ಕೊಟ್ಟನು.

ಬಸವಣ್ಣನವರ ಸಮರ್ಥ ನೇತೃತ್ವದಲ್ಲಿ ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕ ಮತ್ತು ಆರ್ಥಿಕ ಕ್ರಾಂತಿಗಳು ಜರುಗಿ, ಇತಿಹಾಸದಲ್ಲಿ ಅಪೂರ್ವವೆಂದು ಪರಿಗಣಿಸಲ್ಪಡುವ ಅನುಭವ ಮಂಟಪ ಎಂಬ ಅಧ್ಯಾತ್ಮಿಕ ಮಹಾ ಸಂಸ್ಥೆಯ ಜನ್ಮವಾಯಿತು. ವೈರಾಗ್ಯ ನಿಧಿ ಪ್ರಭುದೇವರು ಅಧ್ಯಕ್ಷರಾಗಿದ್ದ ಈ ಅನುಭವ ಮಂಟಪದ ಆಧ್ಯಾತ್ಮಿಕ ಚರ್ಚೆಗಳಲ್ಲಿ ಭಾಗವಹಿಸಲು ಸ್ತ್ರೀ-ಪುರುಷರ ನಡುವೆ ಯಾವುದೇ ಭೇದಭಾವವಿರಲಿಲ್ಲ.

ಬಸವಣ್ಣನವರ ದೈವೀ ಶಕ್ತಿಗೆ ಪ್ರೇರಿತವಾಗಿ ಕಾಶ್ಮೀರದ ಮಹಾದೇವ ಭೂಪಾಲ, ಅಫಘಾನಿಸ್ತಾನದ ಮರುಳ ಶಂಕರದೇವ, ಬಟ್ಟೆಗಾದೆಯ ಪ್ರದೇವರು, ಸೊನ್ನಲಿಗೆಯ ಸಿದ್ಧರಾಮೇಶ್ವರ, ದೇವರಹಿಪ್ಪರಗಿಯ ಮಡಿವಾಳ ಮಾಚಿದೇವರು ಮೊದಲಾದ ಶರಣರು ಮತ್ತು ಉಡುತಡಿಯ ಕಳ್ಳಮಹಾದೇವಿ ಯಕ್ಷ, ಕಾಫೀರದ ಮಹಾದೇವ ಪಾಲಿನ ಪಟ್ಟದ ರಾಣಿಯಾದ ಮಹಾದೇವಿ ಮುಂತಾದ ಶರಣಿಯರು ಭಾಗವಹಿಸಿದ್ದರು. ಈ ಕಾರಣದಿಂದಲೇ ಕಲ್ಯಾಣವು ವಿಮುಕ್ತ ಕ್ಷೇಧವನ್ನು ಅನುಭವಿಸಿತು.

ಭೇಟಿ ನೀಡಿ
ಬಸವಕಲ್ಯಾಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section