ಮೇಲುಕೋಟೆಯ ಗುಹಾಂತರ ದೇವಾಲಯವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಇರುವ ಒಂದು ಗುಹಾ ದೇವಾಲಯವಾಗಿದೆ. ಇದು ಬಾದಾಮಿ ಮತ್ತು ಇತರ ಪ್ರಸಿದ್ಧ ಗುಹಾ ದೇವಾಲಯಗಳಂತೆ ಕಲ್ಲನ್ನು ಕೆತ್ತಿ ನಿರ್ಮಿಸಲಾದ ಪ್ರಾಚೀನ ವಾಸ್ತುಶೈಲಿಗೆ ಒಳಪಡುವುದಾಗಿದೆ. ಮೇಲುಕೋಟೆಯ ಈ ಗುಹಾಂತರ ದೇವಾಲಯವು ಕಲ್ಲಿನ ಮೂಲ ರೂಪದಲ್ಲಿಯೇ ನಿರ್ಮಾಣವಾಗಿದ್ದು, ಕೆಲವೊಂದು ಸ್ತಂಭಗಳು ಮತ್ತು ಒಳಗಡೆ ಒಂದು ಗುಹೆಯನ್ನು ಹೊಂದಿದೆ.
ಈ ದೇವಾಲಯವು ಬೆಂಗಳೂರಿನಿಂದ ಸುಮಾರು 141 ಕಿ.ಮೀ, ಮಂಡ್ಯ ನಗರದಿಂದ ಸುಮಾರು 39 ಕಿ.ಮೀ, ಮೈಸೂರು ನಗರದಿಂದ ಕೇವಲ 56 ಕಿ.ಮೀ ದೂರದಲ್ಲಿದೆ. ಹತ್ತಿರದ ರೈಲು ನಿಲ್ದಾಣವಾಗಿರುವ ಪಾಂಡವಪುರವು ಈ ಸ್ಥಳದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ.
ಭೇಟಿ ನೀಡಿ



