ಸೌಮ್ಯಕೇಶವ ದೇವಾಲಯವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ನಾಗಮಂಗಲ ಪಟ್ಟಣದಲ್ಲಿರುವ ಪ್ರಸಿದ್ಧ ಪುರಾತನ ವಿಷ್ಣು ದೇವಾಲಯವಾಗಿದೆ. ಈ ದೇವಾಲಯವನ್ನು ಹೊಯ್ಸಳ ಹಾಗೂ ವಿಜಯನಗರ ಅರಸರ ಆಳ್ವಿಕೆಯ ಅವಧಿಯಲ್ಲಿ ಹಂತ ಹಂತವಾಗಿ ನಿರ್ಮಿಸಲಾಯಿತು. ದೇವಾಲಯವು ಗೋಪುರ, ಗರ್ಭಗೃಹ, ಪ್ರದಕ್ಷಿಣಾಪಥ ಹಾಗೂ ಪಾತಾಳ ಅಂಕಣವನ್ನು ಒಳಗೊಂಡಿದೆ.
ಈ ದೇವಾಲಯದ ಶಿಖರವು ಕರ್ನಾಟಕದಲ್ಲಿರುವ ಅತ್ಯಂತ ಎತ್ತರದ ದೇವಾಲಯ ಶಿಖರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರ ಭವ್ಯವಾದ ಗೋಪುರವನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿದೆ.
ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಿಸಲಾದ ಈ ದೇವಾಲಯವು ತ್ರಿಕೂಟ (ತ್ರಿಕೂಟಾಚಲ) ಶೈಲಿಯ ವಿನ್ಯಾಸವನ್ನು ಹೊಂದಿದ್ದು, ಇಲ್ಲಿ ಕ್ಷೇತ್ರದ ಪ್ರಧಾನ ದೇವರಾಗಿ ಶ್ರೀ ಸೌಮ್ಯಕೇಶವಸ್ವಾಮಿಯನ್ನು ಆರಾಧಿಸಲಾಗುತ್ತದೆ.
ನಾಗಮಂಗಲ ಸೌಮ್ಯಕೇಶವ ದೇವಾಲಯದ ದೂರಗಳು
- ಬೆಂಗಳೂರು – 118 ಕಿ.ಮೀ
- ಮಂಡ್ಯ – 42 ಕಿ.ಮೀ
- ನಾಗಮಂಗಲ – 1 ಕಿ.ಮೀ
- ಮಂಡ್ಯ ರೈಲ್ವೆ ನಿಲ್ದಾಣ – 43 ಕಿ.ಮೀ
ಇಲ್ಲಿನ ಕೇಶವನ ವಿಗ್ರಹವು ಸೌಮ್ಯವಾದ ಮುಖಭಾವವನ್ನು ಹೊಂದಿರುವುದರಿಂದ, ಇಲ್ಲಿ ನೆಲೆಸಿರುವ ಪರಮಾತ್ಮನನ್ನು ‘ಸೌಮ್ಯಕೇಶವ’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇತರ ಕೇಶವ ದೇವಾಲಯಗಳಲ್ಲಿ ಸ್ವಾಮಿಯು ಬಲಗೈಯಲ್ಲಿ ಸುದರ್ಶನ ಚಕ್ರ ಹಾಗೂ ಎಡಗೈಯಲ್ಲಿ ಪಾಂಚಜನ್ಯ ಶಂಖವನ್ನು ಹಿಡಿದು ಭಕ್ತರಿಗೆ ದರ್ಶನ ನೀಡುತ್ತಾನೆ.
ಆದರೆ ಈ ದೇವಾಲಯದಲ್ಲಿ ಸ್ವಾಮಿಯು ಬಲಗೈಯಲ್ಲಿ ಪಾಂಚಜನ್ಯ ಶಂಖ ಮತ್ತು ಎಡಗೈಯಲ್ಲಿ ಸುದರ್ಶನ ಚಕ್ರವನ್ನು ಧರಿಸಿ, ಶ್ರೀದೇವಿ ಹಾಗೂ ಭೂದೇವಿಯರ ಸಮೇತ ನಿಂತ ಭಂಗಿಯಲ್ಲಿ ಭಕ್ತರಿಗೆ ದರ್ಶನ ನೀಡುವುದು ಈ ದೇವಾಲಯದ ವಿಶಿಷ್ಟ ವೈಶಿಷ್ಟ್ಯವಾಗಿದೆ.
ಭೇಟಿ ನೀಡಿ








