ಬಸದಿ ಬೆಟ್ಟ ಮಂದರಗಿರಿಯು ಕರ್ನಾಟಕ ರಾಜ್ಯದ ತುಮುಕೂರು ಜಿಲ್ಲೆಯ ಪಂಡಿತನಹಳ್ಳಿ ಎಂಬ ಗ್ರಾಮದಲ್ಲಿ ಇದೆ. ಮಂದರಗಿರಿಯು ಒಂದು ಏಕಶಿಲಾಬೆಟ್ಟವಾಗಿದೆ. ಈ ಬೆಟ್ಟವನ್ನು ಬಸದಿ ಬೆಟ್ಟವೆಂದು ಸಹ ಕರೆಯುತ್ತಾರೆ. ಭಾರತದ ಬೃಹತ್ ಏಕಶಿಲಾಬೆಟ್ಟಗಳಲ್ಲಿ ಒಂದು ಎನಿಸಿರುವ ಈ ಬೆಟ್ಟದ ಮೇಲೆ 04 ಬಸದಿಗಳಿವೆ. ಈ ಬೆಟ್ಟಕ್ಕೆ ಬಸದಿ ಬೆಟ್ಟ ಎಂಬ ಹೆಸರು ಬರಲು ಕಾರಣ ಇದರ ಮೇಲಿರುವ ಜೈನ ಬಸದಿಗಳು.
ಈ ಬೆಟ್ಟವು ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ತುಮಕೂರು ನಗರದಿಂದ ಸುಮಾರು 11 ಕಿ.ಮೀ ದೂರದಲ್ಲಿದೆ ಹಾಗೂ ತುಮಕೂರು ಬಳಿಯ ಕ್ಯಾತ್ಸಂದ್ರದಿಂದ ಕೇವಲ 03 ಕಿ.ಮೀ ದೂರದಲ್ಲಿದೆ.
ಇಲ್ಲಿ ಇರುವ ೪ ಬಸದಿಗಳಲ್ಲಿ02 ಬಸದಿಗಳು ಜೈನತೀರ್ಥಂಕರರಾದ ಚಂದ್ರನಾಥರ ಬಸದಿ, 01 ಕೃಪಾಶ್ವನಾಥರ ಪುರಾತನ ಬಸದಿ ಮತ್ತು 01 ಪಾಶ್ವನಾಥರ ಬಸದಿ ಆಗಿದೆ. ಈ ಬಸದಿಗಳೆಲ್ಲವನ್ನು ಪೂರ್ತಿ ಶಿಲೆಯಲ್ಲಿ ನಿರ್ಮಿಸಲಾಗಿದೆ. ಈ ಬಸದಿಗಳು ಸುಮಾರು 1000 ಸಾವಿರಕ್ಕೂ ಹಳೆಯದಾದ ಇತಿಹಾಸ ಹೊಂದಿವೆ.
ಇಲ್ಲಿನ ಕಲ್ಲಿನ ಹಾಸಿನ ಮೇಲೆ ಬೃಹದಾಕಾರದ ಪಾದದ ಕೆತ್ತನೆ ಇದೆ. ಇದನ್ನು ಭೀಮಪಾದ ಎಂದು ಕರೆಯಲಾಗುತ್ತದೆ. ಈ ನಾಲ್ಕೂ ಬಸದಿ ಮಂದಿರಗಳಲ್ಲಿ ಒಂದು ವೈಶಿಷ್ಟ್ಯವಿದೆ ಈ ಯಾವ ಬಸದಿಗೂ ಬಾಗಿಲುಗಳೇ ಇಲ್ಲ. ಎಲ್ಲವನ್ನೂ ತೊರೆದು ವೈರಾಗ್ಯಮೂರ್ತಿಯಾದ ಬಾಹುಬಲಿಯ ಅನುಯಾಯಿಗಳಾದ ತೀರ್ಥಂಕರರ ಗುಡಿಯಲ್ಲಿ ಕದ್ದು ಒಯ್ಯುವಂಥದ್ದೇನೂ ಇಲ್ಲ. ಎಲ್ಲ ತೊರೆದವರಿಗೆ ಬಾಗಿಲುಗಳ ಬಂಧವೇಕೆ ಎಂಬುದನ್ನು ಇದು ಸಾರುವಂತಿದೆ. ಬೆಟ್ಟದ ಮೇಲೆ ಶಿಲಾ ಶಾಸನಗಳೂ ಇವೆ.
ಈ ಬೆಟ್ಟದ ಮೇಲೆ ವಿಶಿಷ್ಟತೆ ಏನು ಎಂದರೆ ಗುರುಮಂದಿರ. ಈ ಗುರುಮಂದಿರ ಸುಮಾರು ೮೧ ಅಡಿ ಎತ್ತರದಲ್ಲಿ ಎದ್ದು ಪಿಂಚಿ ಆಕಾರದಲ್ಲಿ ಇದೆ. ಪಿಂಚಿ ಎಂದರೆ ನವಿಲಿನ ಗರಿಗಳಿಂದ ಮಾಡಿದ ಮುಚ್ಚಲಿಕ್ಕೆ ಎಂದು ಅರ್ಥ. ಈ ಪ್ರಪಂಚದಲ್ಲಿ ಪಿಂಚಿ ಆಕಾರದ ಮಂದಿರ ಎಂದು ಬಸದಿ ಬೆಟ್ಟ ಮಂದರಗಿರಿಯು ಪ್ರಸಿದ್ದಿ ಪಡೆದಿದೆ.
ಭೇಟಿ ನೀಡಿ